ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರನ್ನು ಮರೆತ ರಾಹುಲ್ ಗಾಂಧಿ

By Staff
|
Google Oneindia Kannada News

Rahul Gandhi too busy to meet Kalavati!
ನವದೆಹಲಿ, ಜೂ. 10 : ನಿಮಗೆ ನೆನಪಿರಬಹುದು, ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿದ್ದ ಕಾಲವದು, ಕಾಂಗ್ರೆಸ್ ಪಕ್ಷದ ಯುವನಾಯಕ ಹಾಗೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಿಗ್ವಿಜಯಕ್ಕೆ ಕಾರಣರಾಗಿರುವ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಹಾರಾಷ್ಟ್ರದ ವಿದರ್ಭ ಗ್ರಾಮದ ಕಲಾವತಿ ಎಂಬ ವಿಧವೆಗೆ ಜೀವನದ ಬಗ್ಗೆ ಭಾಷಣ ಬಿಗಿದಿದ್ದರು. ಇಂತಹ ಅಸಹಾಯಕ ಮಹಿಳೆಯರ ಜೀವನಕ್ಕೆ ಕಾಯಕಲ್ಪ ಜೀವನ ನೀಡಬೇಕು. ಹಾಗೆ, ಹೀಗೆ ನೂರೆಂಟು ಮಾತಗಳನ್ನಾಡಿ ಲೋಕಸಭೆಯಲ್ಲಿ ಭೇಷ್ ಅನ್ನಿಸಿಕೊಂಡಿದ್ದರು.

ಆದರೆ ಕೇಳಿ, ಕಲಾವತಿಯಂತಹ ವಿಧವೆ ಮಹಿಳೆಯ ಉದಾಹರಣೆ ನೀಡಿ ಉದ್ಧಾರ ಮಾಡುವೆ ಎಂದು ಸುಳ್ಳು ಭರವಸೆ ನೀಡಿದ ರಾಹುಲ್ ಮತ ಪಡೆಯುವಲ್ಲಿ ಯಶಸ್ವಿಯಾದರು. ಮಹಾರಾಷ್ಟ್ರದಲ್ಲಿ ಕೂಡಾ ಕಾಂಗ್ರೆಸ್ ಮತ್ತು ಎನ್ ಸಿಪಿಗೆ ಜನರಿಂದ ಉತ್ತಮ ಬೆಂಬಲ ಸಿಕ್ಕಿದೆ. ಆದರೆ, ಮತ ನೀಡಿದ ಮತದಾರರನ್ನು ಮುಖ್ಯವಾಗಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದ ಕಲಾವತಿ ಜೀವನ ಬಗ್ಗೆ ಮಾತನಾಡಿದ್ದ ರಾಹುಲ್ ಈವರೆಗೂ ಆಕೆಗೆ ಯಾವ ಸಹಾಯವನ್ನು ಮಾಡದಿರುವುದು ವಿಪರ್ಯಾಸದ ಸಂಗತಿ.

ಒಂಬತ್ತು ಮಕ್ಕಳ ತಾಯಿಯಾಗಿರುವ ಕಲಾವತಿ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ರಾಹುಲ್ ಗಾಂಧಿ ಬಂದ ನಂತರ ಜೀವನ ಹಸನಾಗಬಹುದು ಎಂದುಕೊಂಡಿದ್ದ ಕಲಾವತಿಯ ಕನಸು ಭಗ್ನಗೊಂಡಿದೆ. ನರಕದಲ್ಲಿ ಜೀವನ ತಳ್ಳುತ್ತಿರುವ ಆಕೆಯ ಕೂಗು ಯುವರಾಜನಿಗೆ ಕೇಳಿಸುತ್ತಿಲ್ಲ. ಚುನಾವಣೆಗಳು ಮುಗಿದಿವೆ. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಮುಂದಿನ ಐದು ವರ್ಷದವೆರೆಗೆ ಮತದಾರರ ಕಡೆಗೆ ಯುವನಾಯಕ ತಲೆಹಾಕಿ ಮಲಗುವುದಿಲ್ಲ. ರಾಹುಲ್ ಕೂಡಾ ಹತ್ತರಲ್ಲಿ ಹನ್ನೊಂದನೇ ರಾಜಕಾರಣಿ ಎಂಬುದನ್ನು ಸಾಬೀತು ಮಾಡದಂತಾಗಿದೆ.

ಕುರಿತು ಪ್ರತಿಕ್ರಿಯೆ ನೀಡಿರುವ ಕಲಾವತಿ, ರಾಹುಲ್ ಗಾಂಧಿ ಭೇಟಿಯ ಅಸಹಾಯಕಳಾದ ನನಗೆ ಏನಾದರೂ ಅನುಕೂಲವಾಗಬಹುದು ಎಂದು ನಂಬಿಕೊಂಡಿದ್ದೆ. ಆದರೆ, ನನ್ನ ಜೀವನದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ರಾಹುಲ್ ಗಾಂಧಿ ಬಂದು ನನ್ನ ಕಷ್ಟಗಳನ್ನು ಕೇಳಿ ಭರವಸೆ ನೀಡಿದರೆ ಹೊರತು ಬೇರೆ ಯಾವ ಸಹಾಯವೂ ಆಗಲಿಲ್ಲ. ಒಂಬತ್ತು ಮಕ್ಕಳನ್ನು ಸಾಕಬೇಕಿದೆ. ನಾನು ವಿಧವೆ ಬೇರೆ ಎಂದು ಕಣ್ಣೀರಿಡುತ್ತಾಳೆ. ರಾಹುಲ್ ಗಾಂಧಿ ನೀಡಿದ್ದ ಭರವಸೆಯನ್ನು ನಂಬುವ ಸ್ಥಿತಿಯಲ್ಲಿ ಆಕೆಯಿಲ್ಲ. ಸದ್ಯ ಸ್ಥಳೀಯ ಎನ್ ಜಿಒವೊಂದು ಆಕೆಗೆ ಆಸರೆಯಾಗಿ ನಿಂತಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X