ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಉಗ್ರರೊಂದಿಗೆ ಐಎಸ್ಐ ನಂಟು

By Staff
|
Google Oneindia Kannada News

Pervez Mushrraf
ಲಂಡನ್, ಜೂ. 9 : ತಾಲಿಬಾನ್ ಉಗ್ರರ ಮುಖಂಡ ಸಿರಾಜುದ್ದೀನ್ ಹಖ್ಖಾನಿಯೊಂದಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್ಐ) ಸಂಬಂಧ ಹೊಂದಿದೆ. ಕಳೆದ ವರ್ಷ ಕಾಬೂಲನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿಯಲ್ಲಿ ತಾಲಿಬಾನ್ ಹಾಗೂ ಐಎಸ್ಐ ಕೈವಾಡವಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಲೂಚಿಸ್ತಾನದ ಬಂಡುಕೋರರಿಗೆ ಭಾರತದ ರಾ ಸಂಸ್ಥೆ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಅಪಘಾನಿಸ್ತಾನದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯನ್ನು ಬೈತುಲ್ಲಾ ಮೆಹಸೂದ್ ನೇತೃತ್ವದ ತಾಲಿಬಾನ್ ಉಗ್ರರು ವಶಕ್ಕೆ ತೆಗೆದುಕೊಂಡಾಗ ಸಿರಾಜುದ್ದೀನ್ ಹಖ್ಖಾನಿ ಅವರ ಪ್ರಭಾವದ ಮೇಲೆ ಐಎಸ್ಐ ಬಿಡುಗಡೆಗೊಳಿಸಲಾಗಿತ್ತು. ಅಲ್ಲದೇ ಸಿರಾಜುದ್ದೀನ್ ಹಖ್ಖಾನಿ ಅವರ ಮಗ ಜಲಾಲುದ್ದೀನ್ ಹಖ್ಖಾನಿ ಅಪಘಾನಿಸ್ತಾನದ ತಾಲಿಬಾನ್ ಉಗ್ರರ ಮುಖಂಡತ್ವವನ್ನು ವಹಿಸಿಕೊಂಡಿದ್ದಾನೆ. ಈ ಮೂಲಕ ಐಎಸ್ಐ ಅಪಘಾನಿಸ್ತಾನದ ರಾಯಭಾರಿ ಕಚೇರಿಯನ್ನು ಬಿಡುಗಡೆಗೊಳಿಸಿದ್ದು, ತೆಹ್ರೀಕ್ ಇ ತಾಲಿಬಾನ್ ಎಂಬವ ಉಗ್ರ ಸಂಸ್ಥೆಯನ್ನು ಹುಟ್ಟು ಹಾಕಿರುವ ಬೈತುಲ್ಲಾ ಮೆಹಸೂದ್ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನೆಜೀರ್ ಭುಟ್ಟೋ ಅವರನ್ನು ಹತ್ಯೆ ಮಾಡಿದ್ದು ಎಂದು ಮುಷರಫ್ ಹೇಳಿದ್ದಾರೆ.

ಪಾಕಿಸ್ತಾನದ ಪರಮಾಣು ಅಸ್ತ್ರಗಳು ತಾಲಿಬಾನ್ ಉಗ್ರರ ಕೈವಶದಲ್ಲಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸದ್ಯದ ಮಟ್ಟಿಗೆ ಪಾಕ್ ಸರಕಾರದ ಸುಪರ್ದಿಯಲ್ಲಿದೆ. ಮುಂದಿನ ದಿನಗಳಲ್ಲಿ ತಾಲಿಬಾನ್ ಉಗ್ರರು ಏನಾದರೂ ಮಾಡುವುದಿಲ್ಲ ಎನ್ನುವುದನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X