ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಕೊಳಚೆ ನಿವಾಸಿಗಳಿಗೆ 9000 ಮನೆ

By Staff
|
Google Oneindia Kannada News

Suresh Kumar
ಬೆಂಗಳೂರು, ಜೂನ್.9:ಬೆಂಗಳೂರಿನ ವಿವಿಧ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಸಕ್ತ ವರ್ಷ 9000 ಮನೆಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಎಸ್. ಸುರೇಶ್‌ಕುಮಾರ್ ಅವರು ತಿಳಿಸಿದ್ದಾರೆ.

ರಾಜಾಜಿನಗರದ ವಿಧಾನಸಭಾ ಕ್ಷೇತ್ರದ 7 ಕೊಳಚೆ ಪ್ರದೇಶದ 626 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು ಹಾಗೂ ಡಾ. ರಾಜಕುಮಾರ್ ಕಲಾಕ್ಷೇತ್ರದಲ್ಲಿ ಈ ಕೊಳಚೆ ಪ್ರದೇಶಗಳ ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರವನ್ನು ವಿತರಿಸಿ ಮಾತನಾಡುತ್ತಿದ್ದ ಅವರು ತೀರಾ ಬಡಜನರಿಗೆ ಮನೆ ಕಟ್ಟಲು ಅನಾನುಕೂಲವಾಗಬಹುದಾದ ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದು, ಮುಖ್ಯಮಂತ್ರಿಯವರು ಈ ಯೋಜನೆಗೆ ಚಾಲನೆ ನೀಡಿದರು ಎಂದರು.

ಈ ಯೋಜನೆಯನ್ವಯ ರಾಜಾಜಿನಗರ ವಿಧಾನಸಭಾ ವ್ಯಾಪ್ತಿಯ ಬೋವಿ ಕಾಲೋನಿ, ಶಿವನಹಳ್ಳಿ (ಇಂದಿರಾನಗರ) ಮರಿಯಪ್ಪನಪಾಳ್ಯ, ಆರ್.ಜ.ಇ.ಐ. ಕಾಲೋನಿ ಹರಿಜನರಸಂಘ, ಚಾಮುಂಡಿನಗರ ಹಾಗೂ ಮಂಜುನಾಥ ನಗರಗಳ ಕೊಳಚೆ ನಿವಾಸಿಗಳಿಗೆ ಈ ಹಕ್ಕುಪತ್ರ ವಿತರಿಸಲಾಯಿತು.

ರಾಜಾಜಿನಗರದಲ್ಲಿ ಸುಗಮ ಸಂಚಾರಕ್ಕಾಗಿ ರಾಜಾಜಿನಗರದ ಪ್ರವೇಶ ಸ್ಥಳದಿಂದ ಓಕುಳಿಪುರಂವರೆಗೆ ಕಾರಿಡಾರ್ ನಿರ್ಮಾಣ ಮಾಡಲು ಈಗಾಗಲೇ ಬಿ.ಬಿ.ಎಂ.ಪಿ. ಟೆಂಡರ್ ಕರೆದಿದ್ದು, ಕೆ.ಆರ್. ಸರ್ಕಲ್‌ಗೆ ಚಲಿಸುವ ವಾಹನಗಳಿಗೆ ಅನುಕೂಲವಾಗಲು ರಾಜಾಜಿನಗರದಿಂದ ಕೆ.ಆರ್. ಸರ್ಕಲ್ ಕಡೆಗೂ ಸಹ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.ಸಚಿವರು ಆಯಾ ಪ್ರದೇಶಗಳ ನಿವಾಸಿಗಳ ಮನೆಗೆ ತೆರಳಿ ಹಕ್ಕುಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬಿ.ಡಿ.ಎ. ಕಾರ್ಯದರ್ಶಿ ರೂಪ ಅವರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X