ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಷೇಕ್ ಮನೆಗೆ ಸಿಎಂ ಭೇಟಿ. ಲಕ್ಷ ರು ಪರಿಹಾರ

By Staff
|
Google Oneindia Kannada News

BSY visits Abhishek s home
ಬೆಂಗಳೂರು, ಜೂ. 5 : ಕಳೆದ ಭಾನುವಾರ ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದ ಮೋರಿಯೊಂದಲ್ಲಿ ನೀರುಪಾಲಾದ ಆರು ವರ್ಷದ ಬಾಲಕ ಅಭಿಷೇಕ್ ಮೃತದೇಹ ಪತ್ತೆಗಾಗಿ ಬಿಬಿಎಂಪಿ ನಡೆಸಿದ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದ್ದು, ಕೈಚೆಲ್ಲಿ ಕುಳಿತಿದೆ. ಈ ಮಧ್ಯ ಶುಕ್ರವಾರ ಮಧ್ಯಾಹ್ನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೃತ ಬಾಲಕನ ಮನೆಗೆ ತೆರಳಿ ಬಾಲಕನ ತಾಯಿ ಸೇರಿದಂತೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದ್ದು, ಮೋರಿಯಲ್ಲಿ ಬಾಲನ ಕೊಚ್ಚಿ ಹೋಗಿರುವುದು ವಿಷಾದಕರ ಸಂಗತಿ ಎಂದರು. ಬಾಲಕ ಅಭಿಷೇಕ್ ನಿಗೆ 1 ಲಕ್ಷ ರುಪಾಯಿ ಪರಿಹಾರ ಘೋಷಿಸಲಾಗಿದ್ದು, ಅತನ ಸಹೋದರಿಯ ಶಿಕ್ಷಣಕ್ಕೆ 1 ಲಕ್ಷ ರುಪಾಯಿಯನ್ನು ಠೇವಣಿ ಇಡುವುದಾಗಿ ಹೇಳಿದರು.

ಮೋರಿಗಳಲ್ಲಿ ಬಾಲಕನ ಕೊಚ್ಚಿಕೊಂಡು ಹೋಗಿರುವುದು. ಆರು ದಿನ ಕಳೆದರೂ ಮಗುವಿನ ಮೃತದೇಹ ಪತ್ತೆಯಾಗದಿರುವುದು ಆತಂಕಕಾರಿ ಸಂಗತಿ. ಈ ವಿಷಯದಲ್ಲಿ ಬಿಬಿಎಂಪಿ ಸಮರ್ಥವಾಗಿ ಕಾರ್ಯನಿರ್ವಹಿಸಿದೆ. ಪಾಲಿಕೆ ಆಯುಕ್ತ ಸುಬ್ರಮಣ್ಯ ಅವರು ಮಗುವಿನ ಮೃತದೇಹ ಪತ್ತೆ ಹಚ್ಚಲು ಶಕ್ತಿಮೀರಿ ಶ್ರಮ ವಹಿಸಿದ್ದಾರಕೆ. ಆದರೆ, ದುರದೃಷ್ಟವಶಾತ್ ಮಗು ಪತ್ತೆಯಾಗದಿರುವುದು ಅತ್ಯಂತ ನೋವಿನ ಸಂಗತಿ ಎಂದರು. ಮಗುವನ್ನು ಕಳೆದುಕೊಂಡ ತಾಯಿ ವೇದನೆ, ಸಂಕಟ ಆರ್ಥವಾಗುತ್ತೆ. ಆದರೆ, ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಯಡಿಯೂರಪ್ಪ ವಿವರಿಸಿದರು.

ಘಟನೆಯನ್ನು ಯಾರೂ ರಾಜಕೀಕರಣಗೊಳಸಬಾರದು.ಇಂತಹ ವಿಷಯದಲ್ಲಿ ರಾಜಕೀಯ ಸರಿಯಲ್ಲ. ಬೆಂಗಳೂರಿನಲ್ಲಿರುವ ಮೋರಿಗಳ ದುರಸ್ತಿ ಹಾಗೂ ಅಭಿವೃದ್ಧಿ ಸರಕಾರ ಶೀಘ್ರವೇ ಕ್ರಮಕೈಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳಲ್ಲಿ ಸಂಭವಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಅಭಿಷೇಕ್ ಮನೆಗೆ ತೆರಳಿದ ಮುಖ್ಯಮಂತ್ರಿಗಳೊಂದಿಗೆ ಸಾರಿಗೆ ಸಚಿವ ಆರ್ ಅಶೋಕ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X