ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಹೊಳೆಯಲ್ಲಿ ಹೆಣ್ಣು ಹುಲಿ ಮರಣ

By Staff
|
Google Oneindia Kannada News

Tigress demise , Nagarahole
ಹುಣಸೂರು, ಜೂ.5: ಗುರುವಾರದಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವನ್ಯಜೀವಿ ವಲಯದ ರಕ್ಷಣಾ ಸಿಬ್ಬಂದಿಗಳು ತಾರಕಾ ಗಸ್ತಿನ ಅರಣ್ಯ ಪ್ರದೇಶದಲ್ಲಿ ಗಸ್ತು ಮಾಡುತ್ತಿದ್ದ ಸಂದರ್ಭದಲ್ಲಿ ಹೆಣ್ಣು ಹುಲಿಯೊಂದು ಸ್ವಾಭಾವಿಕವಾಗಿ ಸಾವನ್ನಪ್ಪಿರುವುದನ್ನು ಕಂಡಿರುತ್ತಾರೆ.

ತಕ್ಷಣ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವಲಯ ಅರಣ್ಯಾಧಿಕಾರಿಗಳ ಜೊತೆ ಸ್ಥಳಕ್ಕೆ ತೆರಳಿ ಹುಲಿಯ ಶವವನ್ನು ಪರಿಶೀಲಿಸಲಾಗಿ, ಹುಲಿಯ ದೇಹದ ಮೇಲೆ ಯಾವುದೇ ರೀತಿಯಾದ ಗಾಯಗಳು ಕಂಡುಬಂದಿರುವುದಿಲ್ಲ. ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಶವಪರೀಕ್ಷೆಯನ್ನು ನಡೆಸಲಾಗಿದ್ದು ಅಂದಾಜು ಹುಲಿಯ ವಯಸ್ಸು 12 ವರ್ಷಗಳಾಗಿರುತ್ತದೆ ಎಂದು ಹುಣಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ,ಡಿ. ಯತೀಶ್ ಕುಮಾರ್ ತಿಳಿಸಿದರು.

*****
ದತ್ತು ಸ್ವೀಕಾರ

ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಬೆಂಗಳೂರಿನ ಶ್ರೀನಿವಾಸರಾವ್ ಕಸ್ಬೆಯವರಯ ಒಂದು ಲವ್‌ಬರ್ಡ್ ಹಾಗೂ ಮೈಸೂರಿನ ಎಂ ಶಮಂತ ಅವರು ಒಂದು ಮೊಸಳೆಯನ್ನು ದತ್ತುವಾಗಿ ಪಡೆದಿದ್ದಾರೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X