ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ಮೇಲೆ ಅಣು ಬಾಂಬ್ ಎಸೆದ ಪೈಲೆಟ್ ಸಾವು

By Staff
|
Google Oneindia Kannada News

 Pilot who dropped nuclear bomb on Nagasaki dead
ಲಂಡನ್, ಜೂ. 5 : ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನ್ ನ ನಾಗಾಸಾಕಿ ನಗರದ ಮೇಲೆ ಪರಮಾಣು ಬಾಂಬ್ ಎಸೆದಿದ್ದ ವಿಮಾನದ ಸಹ ಪೈಲೆಟ್ ಆಗಿದ್ದ ಚಾರ್ಲ್ಸ್ ಡೊನಾಲ್ಡ್ ಅಲ್ಬುರಿ (88) ತೀವ್ರ ಹೃದಯಾಘಾತಕ್ಕೆ ಒಳಗಾಗಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

1945, ಅಗಸ್ಟ್ 9 ರಂದು ನಡೆದ ಎರಡನೇ ಮಹಾಯುದ್ಧದಲ್ಲಿ ಬಿ-29 ಬೂಕ್ಸ್ ಸ್ಕೇರ್ ಎಂಬ ವಿಮಾನಕ್ಕೆ ಕರ್ನಲ್ ಪಾಲ್ ಟಿಬ್ಬೆಟ್ಸ್ ಜೂನಿಯರ್ ಎಂಬುವವರು ಪೈಲೆಟ್ ಆಗಿದ್ದರೆ, ಚಾರ್ಲ್ಸ್ ಡೊನಾಲ್ಡ್ ಅಲ್ಬುರಿ ಸಹಪೈಲೆಟ್ ಆಗಿದ್ದರು. ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಸುಮಾರು 10200 ಟನ್ ಅಣು ಬಾಂಬ್ ಎಸೆಯಲು ಈ ಇಬ್ಬರು ಪ್ರಮುಖರು ಎನ್ನಲಾಗಿತ್ತು. ಟಿಬ್ಬೆಟ್ಸ್ ಈಗಾಗಲೇ ಮರಣ ಹೊಂದಿದ್ದಾರೆ. ಗುರುವಾರ ಅಲ್ಬುರಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ ನಡೆಸಿದ ಎರಡನೇ ಮಹಾಯುದ್ಧದಲ್ಲಿ ಸುಮಾರು 40 ಸಾವಿರ ಅಮಾಯಕರು ಸಾವನ್ನಪ್ಪಿದ್ದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X