ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಫಿಕ್ ಪೊಲೀಸರ ಕೈಯಲ್ಲಿ ಹೈಟೆಕ್ ಇಂಟರ್‌ಸೆಪ್ಟರ್!

By Staff
|
Google Oneindia Kannada News

Hitech interceptor for traffic police
ಶಿವಮೊಗ್ಗ, ಜೂ. 4 : ವೇಗವಾಗಿ ವಾಹನ ಓಡಿಸುವವರ, ಸಿಗ್ನಲ್ ಜಂಪ್ ಮಾಡುವವರ, ಕುಡಿದು ವಾಹನ ಓಡಿಸುವವರ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಓಡಿಸುವವರನ್ನು ಸುಲಭವಾಗಿ ಗುರುತಿಸಿ ಕೇಸು ದಾಖಲಿಸಲು ರಾಜ್ಯ ಸರಕಾರ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಇಂಟರ್‌ಸೆಪ್ಟೆರ್ ವಾಹನ ಜಿಲ್ಲಾ ಪೊಲೀಸರಿಗೆ ನೀಡಿದೆ.

ಸಂಚಾರಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಇಂದು ಸಂಜಾರಿ ಪೊಲೀಸರು ನಗರದ ಬಸವೇಶ್ವರ ವೃತ್ತದಲ್ಲಿ ಇಂಟರ್‌ಸೆಪ್ಟೆರ್ ವಾಹನದ ಸಹಾಯದಿಂದ ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಹಿಡಿದು ಪ್ರಕರಣ ದಾಖಲಿಸಿದರು.

ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಇಂಟರ್‌ಸೆಪ್ಟರ್ ವಾಹನದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಕ್ಯಾಮರಾ ಹಾಗೂ ಕಂಪ್ಯೂಟರ್ ಸಹಾಯದಿಂದ ನಿಯಮಗಳ ಉಲ್ಲಂಘನೆಯನ್ನು ಗುರುತಿಸಬಹುದಾಗಿದೆ. ರಾಜ್ಯ ಸರ್ಕಾರವು ಈ ವಾಹನವನ್ನು 15 ಲಕ್ಷ ರೂ.ನೀಡಿ ಖರೀದಿಸಿದ್ದು, ಇಂತಹ ವಾಹನವನ್ನು ಪ್ರತಿ ಜಿಲ್ಲೆಗೊಂದರಂತೆ ಸಂಚಾರಿ ಪೊಲೀಸ್ ಠಾಣೆಗಳಿಗೆ ನೀಡಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X