ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.5ರಂದು ಕುಮಾರಣ್ಣನ ಸ್ಥಾನಕ್ಕೆ ರೇವಣ್ಣ ಆಯ್ಕೆ

By Staff
|
Google Oneindia Kannada News

YSV Datta
ಬೆಂಗಳೂರು, ಜೂ.3: ಜಾತ್ಯಾತೀತ ಜನತಾದಳವು ಜೂನ್ 5 ರಂದು ತನ್ನ ಶಾಸಕರ ಸಭೆ ಕರೆದಿದ್ದು, ಅಂದು ವಿಪಕ್ಷ ನಾಯಕ, ನೂತನ ಪದಾಧಿಕಾರಿಗಳು, ಕಚೇರಿ ನಿರ್ವಾಹಕರನ್ನು ಆಯ್ಕೆ ಮಾಡಲಿದೆ ಎಂದು ಪಕ್ಷದ ವಕ್ತಾರ ವೈಎಸ್ ವಿ ದತ್ತಾ ತಿಳಿಸಿದ್ದಾರೆ.

ಲೋಕಸಭಾ ಸ್ಥಾನವನ್ನು ಉಳಿಸಿಕೊಂಡು ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರ ಸ್ಥಾನ ತುಂಬಬಲ್ಲ ಸಮರ್ಥ ನಾಯಕರನ್ನು ಜೆಡಿಎಸ್ ಆಯ್ಕೆ ಮಾಡಲಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಹೆಚ್ ಡಿ ರೇವಣ್ಣ ಅವರು ಆಯ್ಕೆ ಯಾಗುವ ಸಾಧ್ಯತೆಯಿದೆ. 224 ಸದಸ್ಯರ ವಿಧಾನಸಭೆಯಲ್ಲಿ 25 ಜನ ಶಾಸಕರ ಬಲವನ್ನು ಜೆಡಿಎಸ್ ಹೊಂದಿದೆ.

ಜಿಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಜೆಡಿಎಸ್ ನ ಎಲ್ಲಾ ಅಭ್ಯರ್ಥಿಗಳಿಗೆ ಸಭೆ ಹಾಜರಿರಲು ಸೂಚನೆ ನೀಡಲಾಗಿದೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ ಎಂದು ದತ್ತಾ ಹೇಳಿದರು. ಬಿಜೆಪಿಯ ಆಪರೇಶನ್ ಕಮಲದಿಂದ ಅಭಿವೃದ್ಧಿ ಯೋಜನೆಗಳ ಪ್ರಗತಿಗೆ ಮಾರಕವಾಗಿದೆ. ಆಂತರಿಕ ಕಲಹದಿಂದ ರಾಜ್ಯ ಬಿಜೆಪಿ ಅವನತಿಯ ಹಾದಿ ಹಿಡಿಯಲಿದೆ ಎಂದು ದತ್ತಾ ಕಿಡಿಕಾರಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X