ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಮುಂದಾದ ಬಿಜೆಪಿ

By Staff
|
Google Oneindia Kannada News

Sadananda Gowda
ಬೆಂಗಳೂರು, ಜೂ.3: ಬಿಜೆಪಿ ವಿರುದ್ಧ ಬಹಿರಂಗವಾಗಿ ಕತ್ತಿ ಜಳಪಿಸುತ್ತಿರುವ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನೋಟೀಸ್ ಜಾರಿ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ. ಹಾಗೆಯೇ ಈಶ್ವರಪ್ಪ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸದಾನಂದಗೌಡ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಜನಪರ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಅಧಿಕಾರಕ್ಕೆ ಬಂದಿದೆಯೇ ವಿನಃ ಹಣ, ಹೆಂಡ ಹಂಚಿಕೆಯ ಮೂಲಕ ಅಲ್ಲ ಎಂದು ಸದಾನಂದಗೌಡ ತಿಳಿಸಿದರು. ಈಶ್ವರಪ್ಪ ಆರೋಪದ ಬಗ್ಗೆ ರಾಷ್ಟ್ರಾಧ್ಯಕ್ಷರಿಗೆ ತಿಳಿಸಿದ್ದೇವೆ. ರಾಜ್ಯ ಘಟಕದಿಂದಲೂ ಈಶ್ವರಪ್ಪ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪಕ್ಷದ ಹಿರಿಯ ಸಚಿವರಾಗಿ ಈಶ್ವರಪ್ಪ ಹೀಗೆ ಮಾತನಾಡುವುದು ಸರಿಯಲ್ಲ. ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ. ನಮ್ಮಲ್ಲಿನ ಅಸಮಾಧಾನವನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬೇಕೆ ಹೊರತು ಹೀಗೆ ಬೀದಿರಂಪ ಮಾಡಬಾರದು ಎಂದು ಸದಾನಂದಗೌಡ ಸಲಹೆ ನೀಡಿದರು.

ಸಂಜೆ ಈಶ್ವರಪ್ಪ ಪತ್ರಿಕಾಗೋಷ್ಠಿ
ಸಚಿವರ, ಶಾಸಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಈಶ್ವರಪ್ಪ ಇಂದು ಸಂಜೆ ಸುದ್ದಿಗೋಷ್ಠಿ ಕರೆಯುವುದಾಗಿ ನವದೆಹಲಿಯಲ್ಲಿ ತಿಳಿಸಿದರು. ಸಂಜೆ ನಾಲ್ಕು ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಎಲ್ಲರ ಪ್ರಶ್ನೆಗಳಿಗೆ ಉತ್ತ್ತರ ನೀಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಹಣ, ಹೆಂಡವನ್ನು ಬಿಜೆಪಿ ಹರಿಸಿತು. ಈ ವಿಚಾರದಲ್ಲಿ ಬಿಜೆಪಿಗೂ, ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ವ್ಯತ್ಯಾಸ ಇರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ತನಿಖೆ ನಡೆಸಲಿ ಎಂದು ಈಶ್ವರಪ್ಪ ಒತ್ತಾಯಿಸಿದ್ದರು. ಹಾಗೆಯೇ ಶಿಕಾರಿಪುರಕ್ಕಿಂತಲೂ ಶಿವಮೊಗ್ಗದಲ್ಲಿ ಬಿಜೆಪಿಗೆ ಹೆಚ್ಚು ಮತಳ ಅಂತರವಿತ್ತು ಎಂದು ಯಡಿಯೂರಪ್ಪ ಮೇಲೂ ಈಶ್ವರಪ್ಪ ಆರೋಪ ಹೊರಿಸಿದ್ದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X