ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸೀಸ್ ಜನಾಂಗೀಯ ದ್ವೇಷ : ಅಂಕಿಸಂಖ್ಯೆ ಪ್ರಮಾಣ

By Staff
|
Google Oneindia Kannada News

ನವದೆಹಲಿ, ಜೂ. 3 : ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ನಡೆದಿರುವ ಇತ್ತೀಚಿನ ದಾಳಿಗಳು ಜನಾಂಗೀಯ ದ್ವೇಷದಿಂದಲ್ಲ ಎಂದು ಆಸ್ಟ್ರೇಲಿಯಾ ಹೇಳುತ್ತಿದ್ದರೂ ಆಸ್ಟ್ರೇಲಿಯಾ ಪೊಲೀಸರು ನೀಡಿರುವ ಅಂಕಿಸಂಖ್ಯೆಗಳು ಬೇರೆಯ ಕಥೆಯನ್ನೇ ಹೇಳುತ್ತಿವೆ.

ಕಳೆದ ಎರಡು ವರ್ಷಗಳಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಅಪರಾಧದ ಪ್ರಮಾಣ ಹೆಚ್ಚಿದೆ ಎಂದು ಮೆಲ್ಬೋರ್ನ್ ಪೊಲೀಸ್ ವರಿಷ್ಠ ಅಧಿಕಾರಿ ನೀಡಿರುವ ಹೇಳಿಕೆ ಆಸ್ಟ್ರೇಲಿಯಾ ಸರಕಾರ ನೀಡಿರುವ ಹೇಳಿಕೆ ತದ್ವಿರುದ್ಧವಾಗಿದೆ.

2007 ಮತ್ತು 2008ರಲ್ಲಿ ಭಾರತೀಯರ ಮೇಲೆ 1083 ದಾಳಿಗಳು ನಡೆದಿವೆ. 2008 ಮತ್ತು 2009ರಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಿದ್ದು, ಇಲ್ಲಿಯವರೆಗೆ 1447 ಪ್ರಕರಣಗಳು ದಾಖಲಾಗಿವೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದ್ದಂತೆ ಅವರ ಮೇಲೆ ನಡೆದಿರುವ ದಾಳಿಗಳೂ ಹೆಚ್ಚುತ್ತಿವೆ.

ಕಳೆದ ವರ್ಷ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20 ಸಾವಿರವಿದ್ದರೆ ಈ ವರ್ಷ ಅದು ದುಪ್ಪಟ್ಟಾಗಿದೆ. ಮಂಗಳವಾರ ಕೂಡ ಇನ್ನೊಬ್ಬ ಭಾರತೀಯನ ಮೇಲೆ ದಾಳಿ ನಡೆದಿದ್ದು, ಕಳೆದ 22 ದಿನಗಳಲ್ಲಿ ಆರು ಜನರ ಮೇಲೆ ಹಲ್ಲೆ ಮಾಡಲಾಗಿದೆ.

ಇದರಿಂದಾಗಿ ಆಸ್ಟ್ರೇಲಿಯಾಕ್ಕೆ ಬರುವ ವಿದ್ಯಾರ್ಥಿಗಳ ಮೇಲೆ ಆಗುವ ಪರಿಣಾಮವನ್ನು ಮನಗಂಡಿರುವ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ಜನಾಂಗೀಯ ದ್ವೇಷ ಕುರಿತಂತೆ ತಪ್ಪು ತಿಳಿವಳಿಕೆ ದೂರಮಾಡಲು ಪೊಲೀಸ್ ಮತ್ತು ಪ್ರೊಫೆಸರುಗಳ ನಿಯೋಗವನ್ನು ಭಾರತಕ್ಕೆ ಕಳುಹಿಸಿವೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X