ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಟಾನಿಕ್ ದುರಂತದ ಪ್ರತ್ಯಕ್ಷದರ್ಶಿಯ ನೆನಪು

By Staff
|
Google Oneindia Kannada News

Millivina Dean
ಲಂಡನ್, ಜೂ. 2: 1912 ರಲ್ಲಿ ಸಂಭವಿಸಿದ ಇತಿಹಾಸ ಪ್ರಸಿದ್ಧ ಟೈಟಾನಿಕ್ ದುರಂತದಲ್ಲಿ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದ ಕೊನೆ ಜೀವಿ ಮೃತರಾಗಿದ್ದಾರೆ. ಬ್ರಿಟನ್ ಮೂಲದ ಮಿಲ್ವಿನಾ ಡೀನ್(97) ಭಾನುವಾರ ಕೊನೆಯುಸಿರೆಳೆದಿದ್ದಾರೆ. ಆದರೆ ಕೊನೆ ಪಯಣ ಅಷ್ಟು ಸುಖಕರವಾಗಿರಲಿಲ್ಲ ಎಂದು ಸಂಡೇ ಇಂಡಿಪೆಂಡೆಟ್ ಪತ್ರಿಕೆ ವರದಿ ಮಾಡಿದೆ. ಟೈಟಾನಿಕ್ ಅಜ್ಜಿಯ ಕೊನೆ ನೆನಪುಗಳು ಇಲ್ಲಿವೆ

ಟೈಟಾನಿಕ್ ದುರಂತದಲ್ಲಿ ಬದುಕುಳಿದ ಏಕೈಕ ಜೀವಿ ಎಂಬ ಹಿರಿಮೆ ಗಳಿಸಿದರೂ , ಕೊನೆಗಾಲದಲ್ಲಿ ಆಸ್ಪತ್ರೆ ಖರ್ಚು ವೆಚ್ಚ ಭರಿಸಲಾಗಿದೆ ಡೀನ್ ತತ್ತರಿಸಿದ್ದರು ಎನ್ನಲಾಗಿದೆ. ಟೈಟಾನಿಕ್ ಹಡಗಿನ ಅವಶೇಷಗಳು, ನೆನಪಿನ ಸಂಗ್ರಹಗಳನ್ನು ಮಾರಲು ಮುಂದಾಗಿದ್ದ ಡೀನ್ ಅವರ ನೆರವಿಗೆ ಬಂದಿದ್ದು ನಿರ್ದೇಶಕ ಜೇಮ್ಸ್ ಕಾಮರೂನ್, ನಟ ಲಿಯನಾರ್ಡೋ ಡಿಕಾರ್ಪಿಯೊ ಹಾಗೂ ನಟಿ ಕೇಟ್ ವಿನ್ಸ್ ಲೆಟ್. ಸುಮಾರು 30 ಸಾವಿರ ಡಾಲರ್ ಹಣವನ್ನು ಟೈಟಾನಿಕ್ ಅಜ್ಜಿಗೆ ನೀಡಿ. ಅಮೂಲ್ಯ ಸಂಗ್ರಹವನ್ನು ಉಳಿಸಿಕೊಂಡಿದ್ದಾರೆ. ಡೀನ್ ಅವರು ಹಸ್ತಾಕ್ಷರ ಮಾಡಿದ್ದ ಫೋಟೋ ವನ್ನು ಮಾರಾಟ ಮಾಡಿ ನಿಧಿ ಸಂಗ್ರಹಿಸಲಾಗಿತ್ತು.

ಲಂಡನ್ ನಲ್ಲಿ ಹುಟ್ಟಿದ್ದ ಎಲಿಜಬತ್ ಗ್ಲಾಡಿಸ್ ಮಿಲ್ಲಿವಿನಾ ಡೀನ್ ಕೊನೆವರೆಗೂ ಮದುವೆ ಆಗಿರಲಿಲ್ಲ. ಮಗಳನ್ನು ಸಾಕಿರಲಿಲ್ಲ. ಇಂಗ್ಲೆಂಡ್ ನ ಸೌಂಥಾಂಪ್ಟನ್ ನಲ್ಲಿ ಜೀವಿಸುತ್ತಿದ್ದರು. ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಸೇವೆ ಸಲ್ಲಿಸಿದ ಡೀನ್, ಕಾರ್ಟೋ ಗ್ರಾಫರ್ ಆಗಿ, ತಂಬಾಕು ಮಾರಾಟಗಾರರ ಸಹಾಯಕಿಯಾಗಿ ಕೆಲಸ ನಿರ್ವಹಿಸಿದರು.1975 ರಲ್ಲಿ96 ವರ್ಷದ ತಾಯಿಯನ್ನು, 1992 ರಲ್ಲಿ ಅಣ್ಣ ಬರ್ಟಾಮ್ (81) ನನ್ನು ಕಳೆದು ಕೊಂಡು ಡೀನ್ ಅನಾಥರಾದರು. 1985 ರಲ್ಲಿ ಟೈಟಾನಿಕ್ ಅವಶೇಷಗಳು ಪತ್ತೆ ಆಗುವವರೆಗೂ ನನ್ನ ಇರುವಿಕೆ ಯಾರಿಗೂ ಗೊತ್ತಿರಲಿಲ್ಲ. ನಂತರ ಪ್ರಸಿದ್ಧಿ ಪಡೆದೆ ಎಂದು ತಮ್ಮ ಡೈರಿಯಲ್ಲಿ ದಾಖಲಿಸಿದ್ದಾರೆ.

ಹಡಗು ಹಿಮದ ಬಂಡೆಗೆ ಡಿಕ್ಕಿ ಹೊಡೆದು ಮುಳುಗಿದಾಗ, ಈಕೆ 9 ವಾರದ ಕೂಸು, ತಾಯಿ ಹಾಗೂ ಸೋದರ ಕೂಡ ಬದುಕುಳಿದರೂ, ತಂದೆ ತೀರಿಕೊಂಡರು. ಹಡಗಿನ ಮೂರನೇ ದರ್ಜೆಯಲ್ಲಿ ಪಯಣಿಸುತ್ತಿದ್ದ ಈ ಕುಟುಂಬ ಅಮೆರಿಕದಲ್ಲಿ ಅಂಗಡಿ ತೆರೆದು ಹೊಸ ಉದ್ಯಮ ಆರಂಭದ ಕನಸು ಕಂಡಿತ್ತು ಎನ್ನಲಾಗಿದೆ.ಸುಮಾರು 1500 ಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಈ ಹಡಗು, ಅಂದಿನ ಪಯಣದಅತಿ ಕಿರಿಯ ಪಯಣಿಗಳಾದ ಡೀನ್ ಳನ್ನು ಉಳಿಸಿತ್ತು. 1997 ರಲ್ಲಿ ಟೈಟಾನಿಕ್ ಹೆಸರಿನಲ್ಲಿ ಚಿತ್ರ ತೆರೆಕಂಡು ವಿಶ್ವಖ್ಯಾತಿ ಗಳಿಸಿತು.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X