ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ ವಿಮಾನ ದುರಂತ:228 ಜನ ನೀರು ಪಾಲು

By Staff
|
Google Oneindia Kannada News

Air France
ರಿಯೋ ಡಿ ಜನೈರೋ, ಜೂ.2: ಅತ್ಯಂತ ಭೀಕರ ದುರಂತವನ್ನು ಬ್ರೆಜಿಲ್ ಕಂಡಿದೆ. ಬ್ರೆಜಿಲ್ ನಿಂದ ಫ್ರಾನ್ಸ್ ಗೆ ತೆರಳುತ್ತಿದ್ದ ಏರ್ ಫ್ರಾನ್ಸ್ ವಿಮಾನ ಆಗಸದಿಂದ ಪತನಗೊಂಡಿದ್ದು, ಅದರಲ್ಲಿದ್ದ 216 ಪ್ರಯಾಣಿಕರು, 12 ಮಂದಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಿಡಿಲು, ಮಿಂಚಿನ ಹೊಡೆತಕ್ಕೆ ಸಿಕ್ಕ ವಿಮಾನದಲ್ಲಿ ವಿದ್ಯುತ್ ವೈಫಲ್ಯ ಉಂಟಾಗಿ ವಿಮಾನದ ಯಂತ್ರಗಳು ನಿಷ್ಕ್ರಿಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಅಟ್ಲಾಂಟಿಕ್ ಸಾಗರಕ್ಕೆ ವಿಮಾನ ಬಿದ್ದಿರುವ ಸಾಧ್ಯತೆಯನ್ನು ಖಚಿತಪಡಿಸಲಾಗಿದೆ. ಕೊರೆವ ಚಳಿಗೆ ಪಯಣಿಗರು ಬದುಕುಳಿದಿರುವ ಸಾಧ್ಯತೆಯಿಲ್ಲ ಎಂದು ಬ್ರೆಜಿಲ್ ಸೇನೆ ಹೇಳಿದೆ. ಶೋಧ ಕಾರ್ಯ ಮುಂದುವರೆದಿದೆ.

ಬ್ರೆಜಿಲ್ ನ ರಿಯೋ ಡಿ ಜನೈರೋ ವಿಮಾನ ನಿಲ್ದಾಣದಿಂದ ಭಾನುವಾರ ಸಂಜೆ 7 ಗಂಟೆಗೆ (ಸ್ಥಳೀಯ ಕಾಲಮಾನ)ಹೊರಟ ಏರ್ ಬಸ್ ಎ -330 ವಿಮಾನ ಅಟ್ಲಾಂಟಿಕ್ ಸಾಗರದ ಮೇಲೆ ಹಾರಾಡುವಾಗ ವಾಯು ಸಂಚಾರ ನಿಯಂತ್ರಣ(ATC) ಕಚೇರಿಯ ಸಂಪರ್ಕ ಕಳೆದುಕೊಂಡಿತು. ಸ್ಪೇನ್, ಮೊರಾಕೋ ಹಾಗೂ ಫ್ರಾನ್ಸ್ ದೇಶದ ರೇಡಾರ್ ಕಣ್ಣಿಗೆ ಕಾಣದಂತೆ ಕಣ್ಮರೆಯಾದ ವಿಮಾನ ಭಾರಿ ಅನಾಹುತಕ್ಕೆ ನಾಂದಿ ಹಾಡಿತು ಎಂದು ಫ್ರಾನ್ಸ್ ಸಚಿವ ಲೂಯಿಸ್ ಬೋರ್ಡೂ ಹೇಳಿದ್ದಾರೆ.

ವಿಮಾನದ ಅವಶೇಷಗಳು ಮತ್ತು ಪ್ರಯಾಣಿಕರ ಶವಗಳಿಗಾಗಿ ದಕ್ಷಿಣ ಅಟ್ಲಾ೦ಟಿಕ ಸಾಗರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಪ್ರಯಾಣ ಆರಂಭಿಸಿದ ವಿಮಾನ ನಾಲ್ಕು ಗಂಟೆಗಳ ಹಾರಾಟದ ಬಳಿಕ ಅಟ್ಲಾ೦ಟಿಕ ಸಾಗರದ ಮೇಲೆ ಹಾರುತ್ತಿದ್ದಾಗ ಅದಕ್ಕೆ ಸಿಡಿಲು ಬಡಿದಿರುವ ಶಂಕೆಯಿದೆ.

ದುರಂತಕ್ಕೀಡಾದ ವಿಮಾನದಲ್ಲಿದ್ದ 216 ಪ್ರಯಾಣಿಕರ ಪೈಕಿ 126 ಪುರುಷರು, 82 ಮಹಿಳೆಯರು, 7 ಮಕ್ಕಳು ಒಂದು ಹಸುಗೂಸು ಇತ್ತು . ಬಹುತೇಕ ಪ್ರಯಾಣಿಕರು ಬ್ರೆಜಿಲ್ ನವರು, ಉಳಿದಂತೆ ಫ್ರಾನ್ಸ್, ಜರ್ಮನಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X