ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಮೊಳಗಿತು ಕನ್ನಡ ಡಿಂಡಿಮ

By Staff
|
Google Oneindia Kannada News

HD Devegowda
ನವದೆಹಲಿ, ಜೂ.1: ಲೋಕಸಭೆಗೆ ಆಯ್ಕೆಯಾದ ಎಲ್ಲಾ 28 ಸಂಸದರು ಕನ್ನಡಲ್ಲೇ ಪ್ರಮಾಣವಚನ ಸ್ವೀಕರಿಸಿ ಸಂಸತ್ತಿನಲ್ಲೂ ನಮ್ಮ ಭಾಷೆಯನ್ನು ಮೊಳಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರ ಎಲ್ಲಾ ಸಂಸದರನ್ನು ಕೇಳಿಕೊಂಡಿತ್ತು, ಅದಕ್ಕೆ ಪೂರಕವಾಗಿ ಮೊಯಿಲಿ ಮತ್ತು ಮುನಿಯಪ್ಪ ಹೊರತು ಪಡಿಸಿ ಉಳಿದ ಎಲ್ಲಾ ಸದಸ್ಯರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ ತಮ್ಮ ಭಾಷಾಭಿಮಾನವನ್ನು ಮೆರೆದರು.

ಎನ್ ಸಿಪಿ ಸಂಸದರು ಹಿಂದಿಯಲ್ಲಿ ಪ್ರಮಾಣ ಸ್ವೀಕರಿಸಿ ತಮ್ಮ ಭಾಷಾಭಿಮಾನವನ್ನು ಮೆರೆದಿದ್ದರು. ಹಾಗೆಯೇತೃಣಮೂಲ್ ಕಾಂಗ್ರೆಸ್ ನ ಸಂಸದರು ಧೋತಿ ಕುತ್ರಾ ಧರಿಸಿ ರಾಜ್ಯ ಸಚಿವರಾಗಿ ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ನಮ್ಮ ರಾಜ್ಯದ ಸಂಸದರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾಷಾಭಿಮಾನವನ್ನು ಮೆರೆದಿದ್ದಾರೆ. ಈ ಬಗ್ಗೆ ಡಿ ವಿ ಸದಾನಂದ ಗೌಡ ಮಾತನಾಡುತ್ತಾ , ನಮಗೆ ಕನ್ನಡದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲು ಹೆಮ್ಮೆ ಎನ್ನಿಸುತ್ತದೆ, ನಮ್ಮ ಭಾಷೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲು ಯಾವ ಸಂಸದರಿಗೂ ಯಾವುದೇ ಕೀಳರಿಮೆ ಇಲ್ಲ ಎಂದು ಹೇಳಿದರು.

ಕರ್ನಾಟಕದ ಸಂಸದರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಧರಂಸಿಂಗ್, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಅನಂತ್ ಕುಮಾರ್, ಡಿ.ಬಿ.ಚಂದ್ರೇಗೌಡ, ಸುರೇಶ್ ಅಂಗಡಿ, ಪಿ.ಸಿ.ಮೋಹನ್, ಸಣ್ಣ ಫಕೀರಪ್ಪ, ಪಿ.ಸಿ.ಗದ್ದೀಗೌಡರ್, ರಮೇಶ್ ಜಿಗಜಿಣಗಿ, ಶಿವರಾಮಗೌಡ, ಜೆ.ಶಾಂತಾ, ಶಿವಕುಮಾರ್ ಉದಾಸಿ, ಪ್ರಹ್ಲಾದ್ ಜೋಷಿ, ಜಿ.ಎಂ.ಸಿದ್ದೇಶ್ವರ್, ಬಿ.ವೈ.ರಾಘವೇಂದ್ರ, ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಜನಾರ್ದನ ಸ್ವಾಮಿ, ಜಿ.ಎಸ್.ಬಸವರಾಜ್, ಹೆಚ್.ವಿಶ್ವನಾಥ್, ಆರ್.ಧ್ರುವನಾರಾಯಣ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ದೇವೇಗೌಡಾ, ಕುಮಾರಸ್ವಾಮಿ, ಅನಂತ್ ಕುಮಾರ್, ಖರ್ಗೆ, ನಳಿನ್ ಕುಮಾರ್ ಕಟೀಲ್, ಮಹಾಲಿಂಗೇಶ್ವರ ಅವರು ದೇವರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಆದರೆ ಜಿ ಎಂ ಸಿದ್ದೇಶ್ವರ್ ಮಾತ್ರ ತಂದೆ ತಾಯಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಎಂ.ವೀರಪ್ಪ ಮೊಯಿಲಿ ಮತ್ತು ಕೆ.ಎಚ್.ಮುನಿಯಪ್ಪ ಅವರು ಮಾತ್ರ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ''ನಮ್ಮ ಎಲ್ಲ ಸಂಸದರು ಕನ್ನಡದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಕ್ಕೆ ನಮಗೇನು ಕೀಳರಿಮೆ ಇಲ್ಲ ಎಂದು'' ಹಾವೇರಿ ಸಂಸದ ಶಿವಕುಮಾರ್ ಉದಾಸಿ ತಿಳಿಸಿದರು.

ಜೆ ಎಚ್ ಪಟೇಲ್ ಮೊದಲಿಗರು
ಸಂಸತ್ ಭವನದಲ್ಲಿ ಕನ್ನಡ ಡಿಂಡಿಮ ಮೊಳಗುತ್ತಿರುವುದು ಇದೇ ಮೊದಲಲ್ಲ. ದಿವಂಗತ ಜೆ ಎಚ್ ಪಟೇಲ್ ಅವರು ಸಂಸತ್ ಗೆ 1967ರಲ್ಲಿ ಶಿವಮೊಗ್ಗದಿಂದ ಆಯ್ಕೆ ಯಾಗಿದ್ದಾಗ ಸಂಸತ್ ನಲ್ಲಿ ಕನ್ನಡದಲ್ಲೇ ಭಾಷಣ ಮಾತನಾಡಿದ್ದರು. ಕೆಲ ಸದಸ್ಯರು ಇದನ್ನು ವಿರೋಧಿಸಿದ್ದರು. ಆದರೆ ಅಂದಿನ ಸ್ಪೀಕರ್ ಎನ್ ಸಂಜೀವ ರೆಡ್ಡಿ ಕನ್ನಡದಲ್ಲೇ ಭಾಷಣ ಮಾಡುವಂತೆ ಪಟೇಲರನ್ನು ಹುರುದುಂಬಿಸಿದ್ದರು. ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿದ ಮೊದಲ ಸಂಸದ ಎಂಬ ಗೌರವಕ್ಕೆ ಜೆ ಎಚ್ ಪಟೇಲ್ ಪಾತ್ರರಾಗಿ ಹೊಸ ಇತಿಹಾಸ ಸೃಷ್ಟಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X