ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರೆಯ ಮೇಲೆ ನಾಯಕ ನಟರ ಧೂಮಲೀಲೆ

By Staff
|
Google Oneindia Kannada News

Azad gives stars freedom to smoke on air
ನವದೆಹಲಿ, ಜೂ.1: ಕೇಂದ್ರದ ಹಿಂದಿನ ಆರೋಗ್ಯ ಸಚಿವರಾಗಿದ್ದ ಅನ್ಬುಮಣಿ ರಾಮದಾಸ್ ಅವರ ನಿಲುವಿಗಿಂತ ಈಗಿನ ಆರೋಗ್ಯ ಸಚಿವ ಗುಲಾಂ ನಬಿ ಆಜಾದ ಅವರು ಧೂಮಪಾನ ನಿಷೇಧದ ವಿಚಾರದಲ್ಲಿ ವಿಭಿನ್ನ ನಿಲುವು ತಾಳಿದ್ದಾರೆ. ಟಿವಿ ಅಥವಾ ಸಿನಿಮಾಗಳಲ್ಲಿ ಧೂಮಪಾನದ ದೃಶ್ಯಕ್ಕೆ ಕತ್ತರಿ ಹಾಕುವ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದು ಅವರು ಹೇಳಿಕೆ ನೀಡಿದ್ದಾರೆ.

ಸಿನಿಮಾ ಅನ್ನುವುದು ಮನೋರಂಜನೆ, ಇದಕ್ಕೂ ತಂಬಾಕು ಸೇವನೆಗೂ ಯಾವುದೇ ಸಂಬಂಧ ಇದೆ ಎಂದು ನನಗನಿಸುವುದಿಲ್ಲ ಎಂದು ಹೇಳಿಕೆ ನೀಡಿ ಅನ್ಬುಮಣಿಯವರ ನೀತಿಗೆ ವಿರುದ್ಧ ನಿಲುವು ತಾಳಿದ್ದಾರೆ. ಈ ಹಿಂದೆ ಅನ್ಬುಮಣಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಧೂಮಪಾನವನ್ನು ನಿಷೇಧ ಜಾರಿಗೆ ತರಲು ಮುಂದಾಗಿದ್ದರು. ಈ ಸಂಬಂಧ ಸರಕಾರ ಅಧಿಸೂಚನೆಯನ್ನು ಕೂಡಾ ಹೊರಡಿಸಿತ್ತು. ಆದರೆ ದೆಹಲಿ ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿ ಇದು ಸಿನಿಮಾ ನಿರ್ಮಾಪಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಹೇಳಿತ್ತು.

ಭಾನುವಾರ (ಮೇ 31) ವಿಶ್ವ ತಂಬಾಕುರಹಿತ ದಿನಾಚರಣೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಟಿವಿ, ಸಿನಿಮಾಗಳಲ್ಲಿ ಧೂಮಪಾನಕ್ಕೆ ಅಡ್ಡಿಯಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿರುವುದು ಚರ್ಚಾಸ್ಪದವಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X