ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15ನೇ ಲೋಕಸಭೆಯ ಚೊಚ್ಚಲ ಅಧಿವೇಶನಕ್ಕೆ ಸಜ್ಜು

By Staff
|
Google Oneindia Kannada News

15th Lok Sabha all set to begin operations
ನವದೆಹಲಿ, ಜೂ.1: ಇಡೀ ದೇಶ ಕಾತುರದಿಂದ ಎದುರು ನೋಡುತ್ತಿರುವ ಹದಿನೈದನೇ ಲೋಕಾಸಭೆಯ ಮೊದಲ ಅಧಿವೇಶನ ಸೋಮವಾರ, ಜೂ.1ರಂದು ನಡೆಯಲಿದೆ. ಅಧಿಕಾರದ ಚುಕ್ಕಾಣಿ ಹಿಡಿದಿರುವ ಯುಪಿಎ ನೇತೃತ್ವದ ಸರಕಾರಕ್ಕೆ ಎರಡನೇ ಬಾರಿ ದೇಶವನ್ನು ಆಳಲು ಸಿದ್ಧವಾಗಿದೆ.

ಯುಪಿಎ ಸರಕಾರದ ಕಾರ್ಯಕ್ರಮಗಳಿಗೆ ಈ ಅಧಿವೇಶನ ವೇದಿಕೆಯಾಗಲಿದೆ. ಹಾಗೆಯೇ ರಾಷ್ಟ್ರಪತಿಗಳ ಭಾಷಣ, ಲೋಕಸಭಾಧ್ಯಕ್ಷರ ಆಯ್ಕೆ ಪ್ರಮುಖ ಅಂಶಗಳು. ಹಿರಿಯ ಲೋಕಸಭಾ ಸದಸ್ಯ ಮಾಣಿಕ್ ರಾವ್ ಗವಿಟ್(75) ಅವರನ್ನು ರಾಷ್ಟ್ರಪತಿ ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ. ಮಹಾರಾಷ್ಟ್ರದ ನಂದೂರ್ ಬಾರ್ ಕ್ಷೇತ್ರದಿಂದ 9ನೇ ಬಾರಿಗೆ ಆಯ್ಕೆಯಾಗಿರುವ ಗವಿಟ್ ಸಂಸದರಾಗಿ 27 ವರ್ಷಗಳ ಅನುಭವಿ.

ಅಧಿವೇಶನದ ಮೊದಲ ಎರಡು ದಿನ ಹೊಸದಾಗಿ ಆಯ್ಕೆಯಾಗಿರುವ 543 ಸಂಸದರು ಪ್ರಮಾಣ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಬೋಧಿಸಲು ರಾಷ್ಟ್ರಪತಿ, ನಾಲ್ಕು ಹಿರಿಯ ಸದಸ್ಯರದಾದ ಬಸುದೇವ್ ಆಚಾರಿಯಾ (ಸಿಪಿಎಂ), ಅರ್ಜುನ್ ಸಿಂಗ್ ಚರಣ್ ಸೇಥಿ (ಬಿಜೆಡಿ), ಬಿರೆನ್ ಸಿಂಗ್ ಎಂಗ್ಟಿ (ಕಾಂಗ್ರೆಸ್) ಹಾಗೂ ಸುಮಿತ್ರಾ ಮಹಾಜನ್ (ಬಿಜೆಪಿ) ಅವರ ಸಮಿತಿ ರಚಿಸಿದ್ದಾರೆ.

ಜೂ.3 ರಂದು ಹೊಸ ಸ್ಪೀಕರ್ ಆಯ್ಕೆ ನಡೆಯಲಿದೆ.ಜೂ.4ರಂದು ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜೂ.9ರಂದು ಮೊದಲ ಅಧಿವೇಶನ ಅಂತ್ಯವಾಗಲಿದೆ. ಜೂನ್ ಅಂತ್ಯದಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದ್ದು ನೂತನ ಸರಕಾರ2009-10ನೇ ಸಾಲಿನ ಬಜೆಟನ್ನು ಮಂಡಿಸಲಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X