ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀರಾಕುಮಾರ್ ಮೊದಲ ಮಹಿಳಾ ಸ್ವೀಕರ್?

By Staff
|
Google Oneindia Kannada News

Meira Kumar
ನವದೆಹಲಿ, ಮೇ.31 : ಮೊದಲ ಬಾರಿಗೆ ಮಹಿಳೆಯನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸಿದ ಹೆಗ್ಗಳಿಕೆ ಹೊಂದಿರುವ ಯುಪಿಎ ಸರ್ಕಾರ , ಈಗ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಸ್ಥಾನವನ್ನು ದಲಿತ ಮಹಿಳೆಯೊಬ್ಬರಿಗೆ ನೀಡುವ ಚಿಂತನೆ ನಡೆಸಿದೆ. ಹಾಲಿ ಜಲಸಂಪನ್ಮೂಲ ಸಚಿವೆ ಮೀರಾ ಕುಮಾರ್ ಅವರು ಹುದ್ದೆಯನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

64 ವರ್ಷದ ಮೀರಾಕುಮಾರ್ ಅವರು ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರ ಪುತ್ರಿ ಎಂಬುದು ವಿಶೇಷ. ಲೋಕಸಭೆ ಸಭಾಪತಿ ಸ್ಥಾನಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್ , ಅಂಧ್ರದ ಸಂಸದ ಕಿಶೋರ್ ಚಂದ್ರದೇವ್ ಅವರ ಹೆಸರುಗಳು ಸಹ ಕೇಳಿ ಬಂದಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ವರಿಷ್ಠರ ಸಭೆಯಲ್ಲಿ ಮೀರಾಕುಮಾರ್ ಅವರ ಹೆಸರನ್ನು ಬಹುತೇಕರು ಅನುಮೋದಿಸಿದರು ಎನ್ನಲಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ, ಪಿ ಚಿದಂಬರಂ, ಎ ಕೆ ಎಂಟನಿ ಮತ್ತಿತ್ತರ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಈ ನಡುವೆ ಪ್ರಧಾನಿ ಬಳಿ ಇರುವ ಸಂಸ್ಕೃತಿ ಇಲಾಖೆ , ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವೆ ಅಂಬಿಕಾ ಸೋನಿ ಅವರಿಗೆ ಲಭಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಾಂಘ್ವಿ ತಿಳಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X