ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ!

By Staff
|
Google Oneindia Kannada News

R Ashok
ಬೆಂಗಳೂರು, ಮೇ. 31: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯ ಮೊದಲ ವಾರ್ಷಿಕೋತ್ಸವ ಆಚರಣೆಗೆ ಚಾಲನೆ ನೀಡಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು 11. 30 ಕ್ಕೆ ನಗರದ ಬಸವನಗುಡಿ ಮೈದಾನದಲ್ಲಿ 'ವಿಕಾಸ ಸಂಕಲ್ಪ ಉತ್ಸವ'ಕ್ಕೆ ಚಾಲನೆ ನೀಡಿದರು. ಸಂಭ್ರಮದ ಈ ಕ್ಷಣದಲ್ಲಿ ಬಿಜೆಪಿ, ರಾಜ್ಯದ ಜನತೆಗೆ ಹತ್ತು ಹಲವು ಯೋಜನೆಗಳ ಮಹಾಪೂರವನ್ನು ಹರಿಸುವ ಸಾಧ್ಯತೆಯಿದೆ.

ಈ ಹಿಂದೆ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಒಂದಾದ ಉಚಿತ ಬಸ್ ಪಾಸ್ ವಿತರಣೆ ಕಾರ್ಯಕ್ರಮ ನಾಳೆಯಿಂದ ಕಾರ್ಯಗತ ಆಗಲಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಸುದ್ದಿಗಾರರಿಗೆ ತಿಳಿಸಿದರು. ಕೆಎಸ್ಸಾರ್ಟಿಸಿ ಮತ್ತು ವಿಭಾಗೀಯ ಸಾರಿಗೆ ಸಂಸ್ಥೆಗಳು ಹಾಗೂ ಬೆಂಗಳೂರಿನ ಬಿಎಂಟಿಸಿ ಬಸ್ ಗಳಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಇನ್ನು ಮುಂದೆ ಉಚಿತವಾಗಿ ಪ್ರಯಾಣಿಸಬಹುದು.

ಏಳನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಈ ಉಚಿತ ಬಸ್ ಪಾಸ್ ಸೌಲಭ್ಯ ಅನ್ವಯವಾಗಲಿದೆ. ರಾಜ್ಯದ ಸುಮಾರು 1ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಉಚಿತ ಸೌಲಭ್ಯ ದೊರೆಯಲಿದೆ. 8 ರಿಂದ 10 ನೆ ತರಗತಿಯ ವರೆಗಿನ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿಗಳ ರಿಯಾಯ್ತಿ ದರದ ಬಸ್ ಪಾಸ್ ದರದಲ್ಲಿ ಶೇ. 25 ರಷ್ಟು ಹೆಚ್ಚುವರಿ ರಿಯಾಯ್ತಿ ದೊರೆಯಲಿದೆ.

ವರ್ಷವಿಡೀ ಉಚಿತವಾಗಿ ಪಯಣಿಸಲು ಪಾಸ್ ಪಡೆಯುವ ವೇಳೆ ವಿದ್ಯಾರ್ಥಿಗಳು 70 ರು ಶುಲ್ಕ ಭರಿಸಬೇಕು. ಇದರಲ್ಲಿ 60 ರು ಸೇವಾಶುಲ್ಕವಾದರೆ, 10 ರು ವಿಮಾಕಂತು ಎಂದು ಸಾರಿಗೆ ಸಚಿವರು ಹೇಳಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X