ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ: 3ತಿಂಗಳಲ್ಲಿ 10ಕೊಲೆ, 4ಮಾನಭಂಗ

By Staff
|
Google Oneindia Kannada News

ಶಿವಮೊಗ್ಗ, ಮೇ 31: ಜಿಲ್ಲೆಯಲ್ಲಿ ಜನವರಿ ಯಿಂದ ಮಾರ್ಚ್ ಅಂತ್ಯ ದವರೆಗೆ 10 ಕೊಲೆಗಳು ನಡೆದಿವೆ. ಈ ಅವಧಿ ಯಲ್ಲಿ ಒಂದು ದರೋಡೆ ಪ್ರಕರಣ, 25 ಸುಲಿಗೆ ಪ್ರಕರಣ, 36 ಹಗಲು/ರಾತ್ರಿ ಕನ್ನ ಕಳವು ಪ್ರಕರಣ, 82 ಸಾಮಾನ್ಯ ಕಳ್ಳತನ, 15 ಸರಗಳ್ಳತನ, 4 ಮಾನಭಂಗ ಪ್ರಕರಣಗಳು, 2 ವರದಕ್ಷಿಣೆ ಸಾವು ಮತ್ತು 8 ವರದಕ್ಷಿಣೆ ಕಿರುಕುಳ ಪ್ರಕರಣಗಳು ನಡೆದಿವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಸ್. ಮುರುಗನ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಡೆದ 10 ಕೊಲೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 25 ಸುಲಿಗೆ ಪ್ರಕರಣಗಳಲ್ಲಿ 8 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಸುಲಿಗೆಯಾದ 18,57,850 ರೂ. ಮೌಲ್ಯದ ವಸ್ತುಗಳಲ್ಲಿ 8,70,800 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಗಲು-ರಾತ್ರಿ ಕನ್ನಕಳವು ಪ್ರಕರಣ ಗಳಲ್ಲಿ 9 ಪ್ರಕರಣಗಳನ್ನು ಮಾತ್ರ ಪತ್ತೆ ಹಚ್ಚಿದ್ದು, 6,16,369 ರೂ. ಮೌಲ್ಯದ ವಸ್ತುಗಳಲ್ಲಿ 2,42,029 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾಮಾನ್ಯ ಕಳವು ಪ್ರಕರಣಗಳಲ್ಲಿ 8,28,920 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಶಿವಮೊಗ್ಗದಲ್ಲಿ ಸಾರ್ವಜನಿಕರಿಗೆ ಅತೀ ಹೆಚ್ಚಿನ ತಲೆನೋ ವಾಗಿರುವ 15 ಸರಗಳ್ಳತನ ಪ್ರಕರಣಗಳಲ್ಲಿ 4 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಜಿಲ್ಲಾ ರಕ್ಷಣಾಧಿಕಾರಿ ಮುರುಗನ್ ಈ ಮೂರು ತಿಂಗಳಲ್ಲಿ ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಪ್ರಕರಣಗಳನ್ನು ವಿವರಿಸಿದರು. 4 ಕೊಲೆ ಪ್ರಕರಣಗಳು ಖುಲಾಸೆಯಾಗಿವೆ. ದರೋಡೆ ಪ್ರಕರಣಗಳಲ್ಲಿ ನಾಲ್ಕಕ್ಕೆ ಸಜೆಯಾಗಿದ್ದು, ಎರಡು ಖುಲಾಸೆಗೊಂಡಿವೆ. ಸುಲಿಗೆಯ ನಾಲ್ಕು ಪ್ರಕರಣಗಳು ಖುಲಾಸೆಗೊಂಡಿದೆ. ಹಗಲು-ರಾತ್ರಿ ಕನ್ನ ಕಳುವು ಪ್ರಕರಣಗಳಲ್ಲಿ ಎರಡಕ್ಕೆ ಸಜೆಯಾಗಿದ್ದು, ಹತ್ತು ಪ್ರಕರಣಗಳು ಖುಲಾಸೆಯಾಗಿವೆ. 28 ಸಾಧಾರಣ ಕಳವು ಪ್ರಕರಣಗಳು ಖುಲಾಸೆಗೊಂಡಿವೆ. ದೊಂಬಿ ಪ್ರಕರಣ ಗಳಲ್ಲಿ ಎರಡಕ್ಕೆ ಮಾತ್ರ ಸಜೆಯಾಗಿದ್ದು, 25 ಖುಲಾಸೆ ಗೊಂಡಿವೆ. ಒಟ್ಟು 395 ಪ್ರಕರಣಗಳಲ್ಲಿ ಸಜೆಯಾಗಿದ್ದು, 459 ಪ್ರಕರಣಗಳು ಖುಲಾಸೆಗೊಂಡಿವೆ. ಇನ್ನುಳಿದಂತೆ 261 ಪ್ರಕರಣಗಳು ವಿಲೇವಾರಿಯಲ್ಲಿವೆ ಎಂದು ತಿಳಿಸಿದರು.

ರಸ್ತೆ ಅಪಘಾತಗಳು: ರಸ್ತೆ ಅಪಘಾತ ಪ್ರಕರಣಗಳಲ್ಲಿ 52ಪ್ರಾಣಹಾನಿ ಪ್ರಕರಣಗಳು ನಡೆದಿವೆ. ಸಾಮಾನ್ಯ ರಸ್ತೆ ಅಪಘಾತ 352 ನಡೆದಿದ್ದು, ಮೃತಪಟ್ಟವರ ಸಂಖ್ಯೆ 57 ಆದರೆ, ಗಾಯಗೊಂಡವರ ಸಂಖ್ಯೆ 543 ಆಗಿವೆ.
ಜೂಜಾಟ: 67 ಮಟ್ಕಾ ಜೂಜಾಟ ಪ್ರಕರಣಗಳು ಸೇರಿದಂತೆ ಒಟ್ಟು 84 ಜೂಜಾಟ ಪ್ರಕರಣಗಳು ದಾಖಲಾಗಿವೆ. 175 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 4,60,948 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಪ್ರಕರಣಗಳು: 134 ಅಬಕಾರಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 146 ಜನ ಆರೋಪಿಗಳನ್ನು ಬಂಧಿಸಲಾಗಿದೆ. 43,58,009 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಹುಮಾನ ಪಡೆದವರು: ಕಳೆದ 3 ತಿಂಗಳಿನಲ್ಲಿ ಡಿಎಸ್ಪಿ ಹುದ್ದೆಯಿಂದ ಹಿಡಿದು ಪೊಲೀಸ್ ಪೇದೆ ಹುದ್ದೆಯ ವರೆಗೆ ಒಟ್ಟು 369 ಜನ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ 2008ನೇ ಸಾಲಿನಲ್ಲಿ 9ಜನಕ್ಕೆ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿದೆ ಎಂದು ಎಸ್. ಮುರುಗನ್ ತಿಳಿಸಿದ್ದಾರೆ.
ಹೊಸ ಠಾಣೆಗಳಿಗೆ ಪ್ರಸ್ತಾವನೆ: ನಕ್ಸಲ್ ನಿಗ್ರಹಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಆಂಟಿ ನಕ್ಸಲ್ ಅಕಾಡೆಮಿ, ಆನಂದಪುರ ಮತ್ತು ಬಿ.ಆರ್. ಪ್ರಾಜೆಕ್ಟ್‌ನಲ್ಲಿ ನೂತನ ಪೊಲೀಸ್ ಠಾಣೆ, ಸಾಗರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ, ಹೊಸನಗರದ ನಗರದಲ್ಲಿ ನೂತನ ಪೊಲೀಸ್ ಠಾಣೆ, ಶಿವಮೊಗ್ಗ ಗ್ರಾಮಾಂತರ ಉಪ ವಿಭಾಗಕ್ಕೆ ಪ್ರಸ್ತಾವನೆ ಹಾಗೂ ಡಿ.ಆರ್. ಪೊಲೀಸರ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಈಗಾಗಲೇ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ ಎಂದು ಮುರುಗನ್ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾರಕ್ಷಣಾಧಿಕಾರಿ ಕುಣಿಗಲ್ ಶ್ರೀಕಂಠ ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X