ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಲ್ಬೋರ್ನ್ : ಭಾರತೀಯರ ಮೇಲೆ ಪೆಟ್ರೋಲ್ ಬಾಂಬ್

By Staff
|
Google Oneindia Kannada News

Australia: Petrol bomb thrown at Indian student
ಮೆಲ್ಬೋರ್ನ್, ಮೇ. 29 : ಆಸ್ಟ್ರೇಲಿಯಾದಲ್ಲಿರುವ ಭಾರತೀಯರ ಮೇಲೆ ನಿತ್ಯ ಜನಾಂಗೀಯ ನಿಂದನೆ, ಹಲ್ಲೆಗಳು ನಿರಂತರವಾಗಿ ನಡೆಯತೊಡಗಿವೆ. ಇದೇ ತಿಂಗಳು ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಆಸೀಸ್ ನಾಡಿನಲ್ಲಿರುವ ಭಾರತೀಯರ ಭದ್ರತೆಗೆ ಬಗ್ಗೆ ತೀವ್ರ ಆತಂಕವಾಗಿರುವ ಬೆನ್ನಲ್ಲೇ ಮಂಗಳವಾರ ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಹತ್ಯೆ ಮಾಡುವ ವಿಫಲ ಯತ್ನ ನಡೆದಿದೆ.

ರಾಜೇಶ್ ಕಮಾರ್ ದಾಳಿಗೀಡಾದ ವಿದ್ಯಾರ್ಥಿ. ಮೆಲ್ಬೋರ್ನ್ ದಲ್ಲಿರುವ ಹ್ಯಾರಿಸ್ ಪಾರ್ಕ್ ನ ಮನೆಯಲ್ಲಿದ್ದ ರಾಜೇಶ್ ಕುಮಾರ್ ಮೇಲೆ ಮಂಗಳವಾರ ದಾಳಿ ನಡೆದಿದೆ. ದಾಳಿಕೋರರು ರಾಜೇಶ್ ಕುಮಾರ್ ಅವರನ್ನು ಹತ್ಯೆ ಮಾಡಲು ಅವರ ಮನೆಯೊಳಗೆ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ವಿದ್ಯಾರ್ಥಿಯ ದೇಹ ಶೇ.30 ರಷ್ಟು ಸುಟ್ಟಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ದಾಳಿಕೋರರು ಪತ್ತೆಯಾಗಿಲ್ಲ. ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X