ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಇಲ್ಲಾಂದ್ರೆ ದೇಶಾನೇ ಇಲ್ಲ: ಡಿಕೆಶಿ

By Staff
|
Google Oneindia Kannada News

D K Shivakumar
ಬೆಂಗಳೂರು, ಮೇ. 28 : ನೆಹರೂ ಮನೆತನ ಇಲ್ಲಾಂದ್ರೆ ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಇಲ್ಲಾಂದ್ರೆ ಈ ದೇಶಾನೇ ಇಲ್ಲ ಹೀಗೆ ಬಣ್ಣಿಸಿದವರು ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್. ಪಕ್ಷದ ಕಚೇರಿಯಲ್ಲಿ ನೆಹರೂ ಪುಣ್ಯತಿಥಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೆಹರೂ ಮನೆತನದವರು ದೇಶಕ್ಕೆ ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ನೆಹರೂ ಮನೆತನದವರು ಈ ದೇಶದ ಆಸ್ತಿ, ಅಧಿಕಾರ ತ್ಯಾಗ ಮಾಡಿ ಈ ದೇಶವನ್ನು ಕಟ್ಟಿದರು. ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿಯವರ ಆದರ್ಶವನ್ನು ನಾವು ಜೀವನದಲ್ಲಿ ಪಾಲಿಸಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆದರೂ ರಾಜ್ಯಕ್ಕೆ ಕೇಂದ್ರ ಸರಕಾರ ಪ್ರಾತಿನಿಧ್ಯ ನೀಡಿದೆ. ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ರಾಜ್ಯವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.

ಎಂ ಪಿ ಪ್ರಕಾಶ್ ಮಾತನಾಡಿ ನೆಹರೂ ಅವರು ಅಪರೂಪದ ವ್ಯಕ್ತಿತ್ವವುಳ್ಳವರು. ಅವರಂಥವರು ಬಹಳ ವಿರಳ, ಸರಳ, ಸಜ್ಜನಿಕೆಯ ಪ್ರತಿರೂಪವಾಗಿದ್ದರು. ಅವರ ಆರ್ಥಿಕ ನೀತಿ, ಉದ್ಯೋಗಿಕರಣ ನೀತಿಯಿಂದ ದೇಶ ಅಭಿವೃದ್ದಿ ಶೀಲ ರಾಷ್ಟ್ರವಾಗಿ ಬೆಳೆಯಿತು. ಪ್ರಜಾಪ್ರಭುತ್ವ ಭದ್ರವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ನೆಹರು ಅವರಿಗೆ ಸಲ್ಲಿಸಬೇಕು ಎಂದು ಪ್ರಕಾಶ ಹಾಡಿ ಹೊಗಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X