• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಗಾಥಾ ಸಂಗ್ಮಾ ಚಿಕ್ಕ ವಯಸ್ಸಿನ ಕೇಂದ್ರ ಸಚಿವೆ

By Staff
|
Google Oneindia Kannada News
ನವದೆಹಲಿ, ಮೇ. 28 : ಎರಡನೇ ಬಾರಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಸಂಪುಟದಲ್ಲಿ 59 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ನೂತನ ಸರಕಾರದಲ್ಲಿ ಯುವಕರಿಗೆ ಆದ್ಯತೆ ನೀಡಲಾಗಿದ್ದು, ರಾಜೇಶ್ ಪೈಲೆಟ್ ಮಗ ಸಚಿನ್ ಪೈಲೆಟ್, ಪಿಎ ಸಂಗ್ಮಾ ಅವರ ಮಗಳು 28 ವರ್ಷ ವಯಸ್ಸಿನ ಅಗಾಥಾ ಸಂಗ್ಮಾ, ಜಿತಿನ್ ಪ್ರಸಾದ್, ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಹೊಸ ಸರಕಾರದಲ್ಲಿ ಮೇಘಾಲಯದ ತುರಾ ಲೋಕಸಭೆ ಕ್ಷೇತ್ರದಿಂದ ಎನ್ ಸಿಪಿ ಪಕ್ಷದಿಂದ ಆಯ್ಕೆಯಾಗಿರುವ ಪಿ ಎ ಸಂಗ್ಮಾ ಮಗಳು ಅಗಾಥಾ ಸಂಗ್ಮಾ ಅವರು ಅತ್ಯಂತ ಚಿಕ್ಕ ವಯಸ್ಸಿನ ಸಂಸದರಾಗಿದ್ದಾರೆ. ಇಂದು ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವರಾಗಿ ಕೂಡಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ ಸಚಿನ್ ಪೈಲೆಟ್, ಜಿತಿನ್ ಪ್ರಸಾದ್ ಕೂಡಾ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯುವಸಂಸದರಲ್ಲಿ ನವೀನ ಜಿಂದಾಲ್, ಮಿಲಿಂದ್ ದಿಯೋರಾ ಅವರು ಆಯ್ಕೆಯಾಗಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X