ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಐಎಸ್ಐ ಕಚೇರಿ ಸ್ಫೋಟ; 5 ಸಾವು

By Staff
|
Google Oneindia Kannada News

Blast near ISI office in Lahore, 5 dead
ಲಾಹೋರ್, ಮೇ. 27 : ಲಾಹೋರ್ ನಗರದ ಮಾಲ್ ರಸ್ತೆಯಲ್ಲಿರುವ ಐಎಸ್ಐ ಕಚೇರಿ ಬಳಿ ಪ್ರಬಲ ಬಾಂಬ್ ಸ್ಫೋಟಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಅಲ್ಲದೇ ಬಾಂಬ್ ಸ್ಫೋಟದ ನಂತರ ಗುಂಡಿನ ದಾಳಿಯೂ ನಡೆದಿದೆ. ಘಟನೆಯಲ್ಲಿ 20 ಕಾರುಗಳು ಜಖಂಗೊಂಡಿವೆ. ಎರಡು ಅಂತಸ್ತಿನ ಮಹಡಿ ನಾಶವಾಗಿದೆ. 5 ಮಂದಿ ಮೃತಪಟ್ಟು, 150ಕ್ಕೂ ಜನರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಎಸ್ಐ ಕಚೇರಿ ಬಳಿಯ ಶಾಲೆಯಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ. ಇದು ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ. ಜಮಾತೆ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರ ವಿಚಾರಣೆ ಲಾಹೋರ್ ಹೈಕೋರ್ಟ್ ನಲ್ಲಿ ನಡೆದಿದೆ. ಸ್ಫೋಟ ನಡೆದ ಸ್ಥಳ ಕೂಡಾ ಲಾಹೋರ್ ಹೈಕೋರ್ಟ್ ನ ಕೂಗಳತೆಯ ದೂರದಲ್ಲಿದೆ. ಪಕ್ಕದಲ್ಲಿದ್ದ ಗಂಗಾರಾಮ್ ಆಸ್ಪತ್ರೆಯ ಒಂದು ಭಾಗ ಸ್ಪೋಟದ ತೀವ್ರತೆಗೆ ನಾಶವಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X