ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರ ಕಡಿಯಬಹುದೇ? ಸಭೆಗೆ ಬಂದು ಸಲಹೆ ನೀಡಿ

By Staff
|
Google Oneindia Kannada News

ಮೈಸೂರು, ಮೇ. 26 : ಮೈಸೂರು ಮಹಾನಗರದ ನಾಗರಿಕರ ಹಾಗೂ ಪರಿಸರ ಆಸಕ್ತ ಮತ್ತು ಮಾಧ್ಯಮದವರ ಗಮನಕ್ಕೆ ತರುವುದೇನೆಂದರೆ ಕಾರ್ಯಪಾಲಕ ಇಂಜಿನಿಯರ್ (ಜೆ ಎನ್ ನಮ್) ಮೈಸೂರು ಮಹಾನಗರ ಪಾಲಿಕೆ ನರ್ಮ್ ಯೋಜನೆಯಡಿ ಮೈಸೂರು ಮಹಾನಗರದ ರಾಣಾ ಪ್ರತಾಪ್ ಸಿಂಗ್ ವೃತ್ತದಿಂದ (ರೇಸ್ ಕೋರ್ಸ್) (ಎಂ ಜಿ ರಸ್ತೆ) ಟಿ ನರಸೀಪುರ ರಸ್ತೆ , ಸಿದ್ದಾರ್ಥ ನಗರ ಬಡಾವಣೆ ಆರ್ಚ್ ಗೇಟ್ ಹಾದುಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಎರಡು ಬದಿಯ ಮರಗಳನ್ನು ತೆಗೆಯಲು ಮನವಿ ಸಲ್ಲಿಸಿರುತ್ತಾರೆ.

ಈ ಕಾಮಗಾರಿಗೆ ಅಂದಾಜು 123 ಮರಗಳನ್ನು ತೆರವುಗೊಳಿಸಬೇಕಾಗಿದ್ದು , ಈ ಬಗ್ಗೆ ಕ್ರಮ ವಹಿಸುವ ಮೊದಲು ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆ ಸೂಚನೆಗಳನ್ನು ಪಡೆಯಬೇಕೆಂದು ಅಭಿಪ್ರಾಯವನ್ನು ಇಲಾಖೆ ಹೊಂದಿದೆ. ಈ ಸಂಬಂಧವಾಗಿ ದಿನಾಂಕ ಜೂನ್ 5ರಂದು ಬೆಳಿಗ್ಗೆ 11 ಗಂಟೆಗೆ ಈ ರಸ್ತೆಯ ಆರ್ಚ್‌ಗೇಟ್ ವೃತ್ತದಲ್ಲಿ ಸಭೆ ಕರೆಯಲಾಗಿದೆ. ಈ ಸಂಬಂಧ ಎಲ್ಲಾ ಆಸಕ್ತ ಸಾರ್ವಜನಿಕರು ಹಾಗೂ ಪರಿಸರಾಸಕ್ತರು ಮತ್ತು ಮಾಧ್ಯಮದವರು ನಿಗದಿತ ಸಮಯಕ್ಕೆ ಹಾಜರಾಗಿ ಈ ಮರಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳನ್ನು ನೀಡಬೇಕೆಂದು ಮೈಸೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಕೋರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X