ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಹಳೆ ಪಕ್ಷದ ವಾಸನೆ ಹಿಡಿದು ಬಂದ ಸಿಂಧ್ಯಾ?

By Staff
|
Google Oneindia Kannada News

PGR Sindhia
ಬೆಂಗಳೂರು, ಮೇ. 25: ಸುಮಾರು ಒಂದೂವರೆ ವರ್ಷದ ಕೆಳಗೆ ಗೌಡ್ರ ಪಕ್ಷದ ಸಹವಾಸ ಸಾಕು ಎಂದು ಆನೆ ಹೆಗಲೇರಿ ಸವಾರಿ ಹೊರಟಿದ್ದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಈಗ ಮತ್ತೆ ಜೆಡಿಎಸ್ ಕಡೆ ವಾಲುತ್ತಿದ್ದಾರೆಯೇ? ಹೌದು ಎನ್ನುತ್ತದೆ ಅವರ ಆಪ್ತವಲಯ. ಆದರೆ ಜೆಡಿಎಸ್ ಗೆ ಮರಳುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಖುದ್ಧು ಸಿಂಧ್ಯಾ ಸಾಹೇಬ್ರು ಹೇಳಿಕೆ ನೀಡಿದ್ದಾರೆ.

ಸದ್ಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿ ದೆಹಲಿಯಲ್ಲಿ ಸಚಿವ ಸ್ಥಾನ ಪಡೆಯಲು ಹರ ಸಾಹಸ ಪಟ್ಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಅಪರವೇಳೆಯಲ್ಲಿ ಸೋನಿಯಾ ಜತೆ ಮಾತುಕತೆ ನಡೆಸಿ ಹೊರಬಂದು ಸುದ್ದಿಗ್ರಾಸವಾಗಿ ಅತ್ತ ಕೇಂದ್ರ ಸಚಿವ ಸ್ಥಾನ ಸಿಗದೇ ಹತಾಶರಾದ ಕುಮಾರ, ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡುವರು ಎಂಬ ಸುದ್ದಿ ಹರಡಿತ್ತು. ಆದರೆ ಆ ವಿಷಯವನ್ನು ಅಲ್ಲಗಳೆದ ಅವರ ಅನುಯಾಯಿ ಚೆಲುವರಾಯಸ್ವಾಮಿ, ಎಂಪಿ ಅಥವಾ ಎಂಎಲ್ ಎ ಎರಡಲ್ಲಿ ಯಾವ ಸ್ಥಾನದಲ್ಲಿ ಮುಂದುವರೆಯತ್ತಾರೆ ಎಂಬುದು ಸದ್ಯದಲ್ಲೇ ತಿಳಿಯುತ್ತದೆ ಎಂದಷ್ಟೇ ಹೇಳಿದ್ದರು.

ರಾಮನಗರ ಕ್ಷೇತ್ರದ ಸುಮಾರು ಅರ್ಧದಷ್ಟು ಭಾಗ ಹಳೆ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಈ ಕ್ಷೇತ್ರದಲ್ಲಿ ಸಿಂಧ್ಯಾ ಚಿರಪರಿಚಿತರಾಗಿರುವ ಕಾರಣ, ಅವರ ಅಭ್ಯರ್ಥಿ ಸ್ಥಾನ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಅನಾರೋಗ್ಯ ಪೀಡಿತರಾಗಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿರುವ ಸಿಂಧ್ಯಾ, "ಜೆಡಿಎಸ್ ಸೇರ್ಪಡೆ ಬಗ್ಗೆ ಚರ್ಚಿಸಿಲ್ಲ. ಕಾಂಗ್ರೆಸ್ ಮುಖಂಡರೊಡನೆ ಕೂಡ ಸಂಪರ್ಕದಲ್ಲಿದ್ದೇನೆ ಆದರೆ ಯಾವುದೇ ಪಕ್ಷವನ್ನು ಸೇರುವ ತರಾತುರಿ ಇಲ್ಲ" ಎಂದು ಸಿಂಧ್ಯಾ ಹೇಳಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X