ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ 2 ಕಪ್ ಡೆಕ್ಕನ್ ಚಾರ್ಜರ್ಸ್ ಪಾಲು

By Staff
|
Google Oneindia Kannada News

Deccan Chargers win IPL2
ಜೋಹಾನ್ಸಬರ್ಗ್, ಮೇ 24 : ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಎರಡನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಹೈದರಾಬಾದ್ ನ ಡೆಕ್ಕನ್ ಚಾರ್ಚರ್ಸ್ ತಂಡದ ವಿರುದ್ಧ ಸೋಲುಂಡಿದೆ.

ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಡೆಕ್ಕನ್ ಚಾರ್ಚರ್ಸ್ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಸ್ಟಾರ್ ಬ್ಯಾಟ್ಸ್ ಮನ್, ನಾಯಕ ಗಿಲ್ ಕ್ರಿಸ್ಟ್ ಸೊನ್ನೆ ಹೊಡೆದು ಕುಂಬ್ಳೆಗೆ ಬಲಿಯಾದರು. ಆದರೆ ಹರ್ಷಲ್ ಗಿಬ್ಸ್ (ಅಜೇಯ 53 ರನ್ ಗಳು) ಅವರ ಸಮಯೋಚಿತ ಆಟ ಹಾಗೂ ಸೈಮಂಡ್ಸ್ 21 ಎಸೆತಗಳ 33 ರನ್ ಗಳ ನೆರವಿನಿಂದ ಡೆಕ್ಕನ್ ತಂಡ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 143 ರನ್‌ಗಳಿಸಿತು. ಸಾಧಾರಣ ಮೊತ್ತವನ್ನು ಬೆಂಬತ್ತಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ 9 ವಿಕೆಟ್ ಕಳೆದು ಕೊಂಡು 137 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

ಬೆಂಗಳೂರು ಪರ ಮರ್ವೆ(32) ಹಾಗೂ ರಾಸ್ ಟೇಲರ್ (27) ಕೊಂಚ ಹೋರಾಟದ ಆಟ ಪ್ರದರ್ಶಿಸಿದರು. ಟಿ20ಗೇ ಹೇಳಿ ಮಾಡಿಸಿದ ಆಟಗಾರ ಎಂದೇ ಹೊಗಳಿಕೆ ಗಳಿಸಿರುವ ರಾಬಿನ್ ಉತ್ತಪ್ಪ ಮತ್ತೊಮ್ಮೆ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. 4 ಓವರ್ ಗಳಲ್ಲಿ 16 ರನ್ನಿತ್ತು 4 ವಿಕೆಟ್ ಗಳಿಸಿದ ಅನಿಲ್ ಕುಂಬ್ಳೆಯನ್ನು ಪಂದ್ಯಶೇಷ್ಟ್ರ ಎಂದು ಘೋಷಿಸಲಾಯಿತು. ಡೆಕ್ಕನ್ ಪರ ಸ್ಪಿನ್ನರ್ ಪ್ರಜ್ಞಾನ್ ಓಜಾ 28 ರನ್ನಿತ್ತು 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಕಳೆದ ಬಾರಿ ಐಪಿಎಲ್ ನಲ್ಲಿ ಕೊನೆಯ ಸ್ಥಾನದಲ್ಲಿದ್ದ ಡೆಕ್ಕನ್ ಅಗ್ರಸ್ಥಾನ ಪಡೆದು ಕಪ್ ತನ್ನದಾಗಿಸಿಕೊಂಡಿತು. ಹಾಗೆ ನೋಡಿದರೆ ಈ ಬಾರಿ ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ಸ್ ಸಾಧನೆಯನ್ನು ಕಳಪೆ ಎನ್ನುವಂತಿಲ್ಲ. ಕಳೆದ ಬಾರಿ ಏಳನೇ ಸ್ಥಾನದಲ್ಲಿದ್ದ ತಂಡ ಈ ಬಾರಿ ರನ್ನರ್ ಆಪ್ ಸ್ಥಾನ ಪಡೆದು ನಿರೀಕ್ಷೆ ಮೀರಿದ ಫಲಿತಾಂಶ ನೀಡಿದ್ದಾರೆ.

(ದಟ್ಸ್ ಕ್ರಿಕೆಟ್ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X