ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲಿಘರ್ ನ ಕೊಳದಲ್ಲಿ100 ತಲೆಬುರುಡೆ ಪತ್ತೆ!

By Staff
|
Google Oneindia Kannada News

Children discover 100 human skulls in Aligarh
ಅಲಿಘರ್, ಉತ್ತರಪ್ರದೇಶ, ಮಾ.25: ಇಲ್ಲಿನ ಕೊಳವೊಂದರಲ್ಲಿ ಸುಮಾರು 100 ಕ್ಕೂ ಅಧಿಕ ಮಾನವರ ತಲೆಬುರುಡೆಗಳು ಇರುವುದನ್ನು ಸ್ಥಳೀಯ ಮಕ್ಕಳು ಪತ್ತೆಹಚ್ಚಿದ್ದಾರೆ. ಅಪರಿಚಿತ ಶವಗಳಿಗೆ ಸರಿಯಾದ ಉತ್ತರಕ್ರಿಯೆ ಮಾಡದೆ, ಇಲ್ಲಿನ ಪೊಲೀಸ್ ಇಲಾಖೆ ಕೊಳದೊಳಗೆ ಶವಗಳನ್ನು ಎಸೆದಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬೇಸಿಗೆಯ ಸುಡು ಬಿಸಿಲಿಗೆ ಕೊಳದ ನೀರು ಕಮ್ಮಿಯಿದ್ದ ಕಾರಣ, ಎಂದೋ ಹುದುಗಿದ್ದ ತಲೆಬುರುಡೆಗಳು ಕೊಳದಲ್ಲಿ ಈಜಾಡುತ್ತಿದ್ದ ಮಕ್ಕಳ ಕಣ್ಣಿಗೆ ಕಾಣಿಸಿಕೊಂಡಿವೆ. ದಶಕಗಳಿಗೂ ಹಿಂದಿನ ಕಾಲದಿಂದಲೂ ಈ ಅಮಾನವೀಯ ಕೃತ್ಯ ವನ್ನು ಪೊಲೀಸ್ ಇಲಾಖೆ ನಡೆಸಿಕೊಂಡು ಬಂದಿದೆ ಎನ್ನಲಾಗಿದೆ. ಘಟನೆ ಬಗ್ಗೆ ತಿಳಿದ ಮಾನವ ಹಕ್ಕುಗಳ ಸಂಘ ಪೊಲೀಸ್ ಇಲಾಖೆಗೆ ಛೀಮಾರಿ ಹಾಕಿದೆ.ಅಪರಿಚಿತ ಶವವಾದರೂ, ಸರಿಯಾದ ಅಂತಿಮ ಸಂಸ್ಕಾರ ನೀಡುವುದು ನಾಗರೀಕ ಸಮಾಜದ ಕರ್ತವ್ಯ. ಕಾನೂನು ಪಾಲಕರೇ ಹೀಗೆ ಹಾದಿ ತಪ್ಪಿ ನಡೆದರೆ ಹೇಗೆ ಎಂದು ಉತ್ತರಪ್ರದೇಶ ಮಾನವ ಹಕ್ಕುಗಳ ಸಂಘಟನೆ ಮುಖ್ಯಸ್ಥ ಆಶೀಶ್ ಶುಕ್ಲಾ ಪ್ರಶ್ನಿಸಿದ್ದಾರೆ.

(ಏಜೆನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X