• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಯಲ್ಸ್ ಮತ್ತು ಸೂಪರ್ ಕಿಂಗ್ಸ್ ಸಮರ ಇಂದು

By Staff
|

ಜೋಹಾನ್ಸಬರ್ಗ್, ಮೇ 23 : ಎಲ್ಲರ ನಿರೀಕ್ಷೆಗಳನ್ನು ಧೂಳಿಪಟ ಮಾಡಿ ಸೆಮಿಫೈನಲ್ ಪ್ರವೇಶಿಸಿರುವ ಅನಿಲ್ ಕುಂಬ್ಳೆ ನಾಯಕತ್ವದ ರಾಯಲ್ ಚಾಲೇಂಜರ್ಸ್ ತಂಡ ಭರ್ಜರಿ ಫಾರ್ಮ್ ನಲ್ಲಿರುವ ಹೇಡನ್ ಮತ್ತು ರೈನಾ ಇರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇಂದು ನಡೆಯಲಿರುವ ಎರಡನೇ ಸೆಮಿಫೈನಲ್ ನಲ್ಲಿ ಎದುರಿಸಲಿದೆ.

ಲೀಗ್ ಹಂತದಲ್ಲಿ ಚೆನ್ನೈ ತಂಡವನ್ನು ಸದೆಬಡಿದಿದ್ದ ರಾಯಲ್ಸ್ ತಂಡ ಧೋನಿ ತಂಡಕ್ಕೆ ಇಂದು ಕೂಡ ಅದೇ ರೀತಿಯ ಉತ್ತರ ನೀಡಬಲ್ಲದೆ ಎಂಬುದೇ ಸದ್ಯಕ್ಕೆ ಎಲ್ಲರ ಮನದಲ್ಲಿ ಮೂಡಿರುವ ಪ್ರಶ್ನೆ. ಮೇಲ್ನೋಟಕ್ಕೆ ಧೋನಿ ಪಡೆಯೇ ಬಲಿಷ್ಠವಾಗಿ ಕಾಣುತ್ತಿದೆಯಾದರೂ ಹೇಡನ್ ಮತ್ತು ರೈನಾ ಬ್ಯಾಂಟಿಂಗನ್ನೇ ನೆಚ್ಚಿಕೊಂಡಿದೆಯೆಂಬುದನ್ನು ಅಲ್ಲಗಳೆಯಲಾಗದು. ಆರಂಭದಲ್ಲಿಯೇ ಇಬ್ಬರನ್ನೂ ಕಟ್ಟಿಹಾಕಿದರೆ ಅರ್ಧ ಪಂದ್ಯ ಗೆದ್ದಂತೆಯೇ.

ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ನಿವೃತ್ತಿಯ ನಂತರ ಟ್ವೆಂಟಿ20 ಪಂದ್ಯಗಳಿಗೆ ಮರಳಿ ಬಂದಿರುವ ಮ್ಯಾಧ್ಯೂ ಹೇಡನ್ ತಮ್ಮಲ್ಲಿ ಇನ್ನೂ ಎಂಥ ಸಾಮರ್ಥ್ಯವಿದೆ ಎಂಬುದನ್ನು ಪಂದ್ಯಾವಳಿಯುದ್ದಕ್ಕೂ ಸಾಬೀತುಪಡಿಸಿದ್ದಾರೆ. ಅವರ ಜೊತೆಜೊತೆಯಾಗಿ ನಿಂತಿರುವ ಸುರೇಶ್ ರೈನಾ ವಿರೋಧಿ ತಂಡದವರನ್ನು ಕಕ್ಕಾಬಿಕ್ಕಿ ಮಾಡಬಲ್ಲರು. ಧೋನಿ ಮತ್ತು ಬದರಿನಾಥ್ ಅವರನ್ನೂ ತೆಗೆದುಹಾಕುವಂತಿಲ್ಲ. ಧೋನಿ ಅದ್ಭುತ ಲಯ ಕಂಡುಕೊಂಡಿರದಿದ್ದರೂ, ಯಾವುದೇ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ತೋರಿಸಬಲ್ಲರು. ಮೈಕ್ ಹಸ್ಸಿ ಸೇರ್ಪಡೆ ಚೆನ್ನೈ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮುರಳಿಧರನ್ ಅವರ ಬೌಲಿಂಗ್ ದಾಳಿ ಎಂಥವರನ್ನೂ ಕಂಗೆಡಿಸಬಲ್ಲದು.

ಇನ್ನೊಂದು ಬದಿಯಲ್ಲಿ 'ಟೆಸ್ಟ್ ತಂಡ' ಎಂದು ಕ್ರಿಕೆಟ್ ಪಂಡಿತರ ತೆಗಳಿಗೆ ಪಾತ್ರವಾಗಿದ್ದ ರಾಯಲ್ ಚಾಲೇಂಜರ್ಸ್ ತಂಡ ಕುಂಬ್ಳೆ ನಾಯಕತ್ವದಲ್ಲಿ ಸಂಘಟಿತ ಆಟ ತೋರಿಸಿ ಸೂಪರ್ ಸ್ಟಾರ್ ಗಳಿಲ್ಲದಿದ್ದರೂ ಎದುರಾಳಿಗಳಿಗೆ ತಣ್ಣೆಗೆ ಉತ್ತರ ನೀಡಿದೆ. ಹಿರಿಯ ಆಟಗಾರ ಜಾಕ್ ಕಾಲಿಸ್ ಅದ್ಭುತ ಫಾರ್ಮ್ ನಲ್ಲಿದ್ದರೂ ಗಾಯಗೊಂಡಿರುವುದರಿಂದ ಸೆಮಿಫೈನಲ್ ಆಟವಾಡುವುದು ಅನುಮಾನ ಎನ್ನಲಾಗಿದೆ. ಅವರಿಲ್ಲದಿದ್ದರೂ ಟೇಲರ್, ದ್ರಾವಿಡ್, ಕೋಹ್ಲಿ, ಬೌಚರ್ ಆಸರೆಯಾಗಿ ನಿಲ್ಲಬಲ್ಲರು.

ಪ್ರಥಮ ಸೆಂಚುರಿ ಬಾರಿಸಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮನೀಶ್ ಪಾಂಡೆ ಎಂಥ ಆಟವಾಡಬಲ್ಲರು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅತ್ಯುತ್ತಮವಾಗಿ ಆಡುತ್ತಿರುವ ರಾಸ್ ಟೇಲರ್ ಅವರಿಗೆ ಮ್ಯಾಚ್ ವಿನ್ನರ್ ಎಂಬ ಹಣೆಪಟ್ಟಿ ಆಗಲೇ ತಗುಲಿಕೊಂಡಿದೆ. ರಾಬಿನ್ ಸಿಂಗ್ ಮೈಭಾರದಿಂದಾಗಿ ಆಲಸಿಯಂತೆ ಆಡುತ್ತಿದ್ದರೂ ಕಡೆಗಣಿಸುವಂತಿಲ್ಲ. ಕುಂಬ್ಳೆ, ಅಖಿಲ್, ಪ್ರವೀಣ್ ಕುಮಾರ್ ಹೊಂದಿರುವ ರಾಯಲ್ಸ್ ಬೌಲಿಂಗ್ ವಿಭಾಗದಲ್ಲಿ ಅಂಥ ಬಲಿಷ್ಠವಾಗೇನೂ ಇಲ್ಲ ಎಂಬುದೇ ಅದರ ಕೊರತೆ. ಆದರೆ, ಕುಂಬ್ಳೆ ಅವರ ಸ್ಫೂರ್ತಿಯುತ ನಾಯಕತ್ವ ರಾಯಲ್ಸ್ ತಂಡಕ್ಕೆ ಜಂಬೋ ಬಲ ತಂದಿದೆ.

ಭಾರತೀಯ ಕಾಲಮಾನ ಸಂಜೆ ಎಂಟು ಗಂಟೆಗೆ ಜೋಹಾನ್ಸಬರ್ಗ್ ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಲಿದೆ. ಮೊದಲ ಸೆಮಿಫೈನಲ್ ಅನ್ನು ದೆಹಲಿ ತಂಡವನ್ನು ಸದೆಬಡಿದ ಡೆಕ್ಕನ್ ಚಾರ್ಜರ್ಸ್ ಗೆದ್ದುಕೊಂಡಿದೆ.

(ದಟ್ಸ್ ಕ್ರಿಕೆಟ್ ವಾರ್ತೆ)

ಕವನ ಸಿಂಚನ

ರಾಯಲ್ಸು ಬ೦ದರು ಸೆಮಿಫೈನಲ್ಸ್‌ಗೆ ಸ೦ಜೆಯಾಗಿತ್ತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X