ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರಂ ಆದ ಖರ್ಗೆ; ಕಮರಿದ ಹೋದ ಎಚ್ಡಿಕೆ ಆಸೆ

By Staff
|
Google Oneindia Kannada News

Krishna and Moily felicitated in Karnataka Bhavana, New Delhi
ನವದೆಹಲಿ, ಮೇ.23:ಕೇಂದ್ರದ ನೂತನ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಎಸ್ ಎಂ ಕೃಷ್ಣ, ವೀರಪ್ಪ ಮೊಯಿಲಿ ಮತ್ತು ಗುಲಾಂನಬಿ ಆಜಾದ್ ಅಭಿನಂದನಾ ಸಮಾರಂಭಕ್ಕೆ ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ ಗೈರುಹಾಜರಾಗುವ ಮೂಲಕ ತಮ್ಮ ಅತೃಪ್ತಿ, ಅಸಮಾಧಾನ, ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್ ಮುಖಂಡರು ನೂತನ ಸಚಿವರ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಎಸ್ ಎಂ ಕೃಷ್ಣ, ಮೊಯಿಲಿ ಮತ್ತು ರಾಜ್ಯ ಉಸ್ತುವಾರಿ ಗುಲಾಂ ನಬಿ ಆಜಾದ್ ಅವರನ್ನು ರಾಜ್ಯ ಕಾಂಗ್ರೆಸ್ ಮುಖಂಡರಾದ ಡಿ ಕೆ ಶಿವಕುಮಾರ್, ವಿ ಎಸ್ ಉಗ್ರಪ್ಪ ಮುಂತಾದವರು ಅಭಿನಂದಿಸಿದರು.

ಕೇಂದ್ರ ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ಸಿಗುತ್ತದೆ ಎಂದು ಖರ್ಗೆ ನಿರೀಕ್ಷಿಸಿದ್ದರು. ಅವರ ಆಸೆ ಫಲಿಸದ ಕಾರಣ ಖರ್ಗೆ ಸಾಹೇಬರು 'ಗರಂ' ಆಗಿದ್ದಾರೆ ಎನ್ನಲಾಗಿದೆ. ಅವರು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸದೆ ತಮ್ಮಲ್ಲಿನ ಅಸಮಾಧಾನವನ್ನು ಸಾಬೀತು ಪಡಿಸಿದಂತಾಗಿದೆ.

ಎಚ್ಡಿಕೆಗೆ ಕನ್ನಡಿ ಗಂಟಾದ ಸಚಿವ ಸ್ಥಾನ
ಯುಪಿಎ ಸರಕಾರಕ್ಕೆ ಮೂರು ಸಂಸದರ ಬಲವುಳ್ಳ ಜೆಡಿಎಸ್ ಬೆಂಬಲ ಘೋಷಿಸಿದ ನಂತರ ಆ ಪಕ್ಷಕ್ಕೆ ಸಚಿವ ಸ್ಥಾನ ನೀಡುವ ವಿಚಾರವೂ ಹೊಸ ತಿರುವು ಪಡೆದುಕೊಂಡಿದೆ. ಜೆಡಿಎಸ್ ಬೆಂಬಲ ನೀಡುವಾಗ ಯಾವುದೇ ಬೇಡಿಕೆ ಇಟ್ಟಿರಲಿಲ್ಲ ಎಂದು ಕರ್ನಾಟಕ ಉಸ್ತುವಾರಿ ಹೊತ್ತಿರುವ ಗುಲಾಂನಬಿ ಆಜಾದ್ ತಿಳಿಸಿದ್ದಾರೆ.

ಸುದ್ದಿಗಾರರೊಂಗಿಗೆ ಮಾತನಾಡುತ್ತಿದ್ದ ಅವರು, ಯುಪಿಎ ಸರಕಾರಕ್ಕೆ ಬೆಂಬಲ ನೀಡಲು ಕುಮಾರಸ್ವಾಮಿ ಯಾವುದೇ ಷರತ್ತು ಇಲ್ಲ. ಸಚಿವ ಸ್ಥಾನ ಬೇಕಂತಲೂ ಬೇಡಿಕೆ ಇಟ್ಟಿಲ್ಲ ಎಂದು ಗುಲಾಂನಬಿ ಸ್ಪಷ್ಟಪಡಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಎಣಿಸಿದ್ದ ಅವರ ಬೆಂಗಲಿಗರಆಸೆ ಕಮರಿಹೋದಂತಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X