ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನಮೋಹನ್ ಸಿಂಗ್ ಪ್ರಚಂಡ ಆಡಳಿತಗಾರ, ಒಬಾಮಾ
ನೂತನವಾಗಿ ಅಮೆರಿಕದ ಭಾರತೀಯ ರಾಯಭಾರಿಯಾಗಿ ನೇಮಕಗೊಂಡಿರುವ ಮೀರಾಶಂಕರ್ ಅವರನ್ನು ಒವೆಲ್ ನಲ್ಲಿರುವ ವೈಟ್ ಹೌಸ್ ಕಚೇರಿಗೆ ಬರಮಾಡಿಕೊಂಡ ಒಬಾಮಾ, ಭಾರತದಲ್ಲಿ ಜಾತ್ಯಾತೀತ ಸರಕಾರ ಪುನರಾಯ್ಕೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮನಮೋಹನ್ ಸಿಂಗ್ ಖ್ಯಾತ ಅರ್ಥ ಶಾಸ್ತ್ರಜ್ಞರಾಗಿದ್ದು, ದೇಶದ ಆರ್ಥಕತೆಯ ಮೇಲೆ ಅವರಿಗೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಹೀಗಾಗಿ ಆರ್ಥಿಕ ಹಿಂಜರಿತದ ನಡುವೆಯೂ ಭಾರತ ತನ್ನತನವನ್ನು ಕಾಪಾಡಿಕೊಂಡಿದೆ. ಇದಕ್ಕೆ ಕಾರಣ ಮನಮೋಹನ್ ಸಿಂಗ್ ಅವರ ಚಾಣಾಕ್ಷ ಆಡಳಿತ ಎಂದು ಒಬಾಮಾ ಹೇಳಿದರು.
ಈವೆರೆಗೂ ಅಮೆರಿಕದ ರಾಯಭಾರಿಯಾಗಿದ್ದ ರೊನೇನ್ ಸೇನ್ ಅವರು ಮಾರ್ಚ್ 31 ಕ್ಕೆ ನಿವೃತ್ತಿಯಾದರು. ಆವರ ಸ್ಥಾನಕ್ಕೆ ಮೀರಾಶಂಕರ್ ಅವರನ್ನು ನೇಮಿಸಲಾಗಿದೆ. ಮೀರಾ ಶಂಕರ್ ಅವರು ಭಾರತದ ರಾಯಭಾರಿಯಾಗಿ ಜರ್ಮನಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
(ಏಜನ್ಸೀಸ್)
Comments
ಮನಮೋಹನ್ ಸಿಂಗ್ manmohan singh washington ವಾಷಿಂಗ್ ಟನ್ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ us president barack obama
Story first published: Thursday, May 21, 2009, 11:58 [IST]