ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇನ್ಫೋಸಿಸ್ : 1000 ಉದ್ಯೋಗಿಗಳ ನೇಮಕಕ್ಕೆ ಚಿಂತನೆ
ಹೌಸ್ಟನ್, ಮೇ. 21 : ಆರ್ಥಿಕ ಹಿಂಜರಿತದ ನಡುವೆಯೂ ಮುಂದಿನ ಒಂದೂವರೆ ವರ್ಷದೊಳಗೆ 1000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಕಂಪನಿ ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ, ಅಮೆರಿಕದಲ್ಲಿರುವ ಕಂಪನಿಯ ಶಾಖೆಗೆ 1000 ಉದ್ಯೋಗಿಗಳ ಅವಶ್ಯಕತೆ ಇದೆ. ಆರ್ಥಿಕ ಹಿಂಜರಿತ ಇದ್ದರೂ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದೆ ಎಂದರು.
ಮುಂದಿನ 12 ಅಥವಾ 18 ತಿಂಗಳಲ್ಲಿ 1000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು. ಆರ್ಥಿತ ಕುಸಿತ ಕಂಡರೂ ಕಂಪನಿಗೆ ಯೋಜನೆಗಳ ಕೊರತೆಯೇನೂ ಇಲ್ಲ. ಕಂಪನಿ ಮೇಲೆ ವಿಶ್ವಾಸವಿರಿಸಿ ಅನೇಕ ಮಂದಿ ಸೇವೆ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳು ನೇಮಕಕ್ಕೆ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.
(ಏಜನ್ಸೀಸ್)
Comments
ಅಮೆರಿಕ global economic crisis ಇನ್ಫೋಸಿಸ್ infosys ಆರ್ಥಿಕ ಹಿಂಜರಿತ united states kris gopalakrishnan ಕ್ರಿಸ್ ಗೋಪಾಲಕೃಷ್ಣ houston indian economy
Story first published: Thursday, May 21, 2009, 18:41 [IST]