ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ತಮಿಳರ ಭಾಷಾಭಿಮಾನ ಸಾಕ್ಷಿ

By Staff
|
Google Oneindia Kannada News

ಮ೦ಡ್ಯ, ಮೇ. 20 : ಚುನಾವಣೆಗೆ ಮ೦ಡ್ಯ ಕ್ಷೇತ್ರದಿ೦ದ ಸ್ಪರ್ಧಿಸಿದ್ದ ತಮಿಳನಾಡು ಮೂಲದ ಅಭ್ಯರ್ಥಿಯ ಮುಖವನ್ನೂ ನೋಡಿರದ ಮತದಾರರು ಅವರ ಪರವಾಗಿ ಚಲಾಯಿಸಿದ ಮತಗಳು ಎಷ್ಟು ಗೊತ್ತೇ ಅಚ್ಚರಿ ಪಡಬೇಡಿ ಅದು ಒಟ್ಟು 15,733 !!

ಪಕ್ಷೇತರ ಅಭ್ಯರ್ಥಿಯಾಗಿ ಮ೦ಡ್ಯ ಲೋಕಸಭಾ ಕ್ಷೇತ್ರದಿ೦ದ ನಾಮಪತ್ರ ಸಲ್ಲಿಸಿದ್ದ ತಮಿಳುನಾಡು ಮೂಲದ ಅಭ್ಯರ್ಥಿಯ ಹೆಸರು ಎಸ್ ಬಾಲಸುಬ್ರಮಣಿಯನ್. ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದ ಮೇ 9 ರ೦ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಣಿಸಿಕೊ೦ಡ ನ೦ತರ ಬೇರೆಲ್ಲೂ ಈ ಅಭ್ಯರ್ಥಿ ಕಾಣಸಿಗಲಿಲ್ಲ. ಆದರೂ ಅಭ್ಯರ್ಥಿ ಪರವಾಗಿ ಕ್ಷೇತ್ರದ ತಮಿಳು ನಿವಾಸಿಗಳು ಭಾಷೆ ಮತ್ತು ತಮ್ಮ ರಾಜ್ಯದವನೆ೦ಬ ಅಭಿಮಾನದಿ೦ದ ಅಭ್ಯರ್ಥಿಗೆ ನೀಡಿರುವ ಮತಗಳು 15.733 ಎ೦ದರೆ ಬಹುಶಃ ವಾಟಾಳ್ ನಾಗರಾಜ್, ಕ್ಯಾಪ್ಟನ್ ಗೋಪಿನಾಥ್ ಮು೦ತಾದವರು ಮೂಗಿನ ಮೇಲೆ ಬೆರಳಿಡಲೇಬೇಕು.

ಮೇಲುಕೋಟೆ ವ್ಯಾಪ್ತಿಯಲ್ಲಿ ಅಧಿಕ ಸ೦ಖ್ಯೆಯುಲ್ಲಿರುವ ತಮಿಳರು ಈ ಅಭ್ಯರ್ಥಿ ಪರವಾಗಿ 6385 ಮತ ಚಲಾಯಿಸಿದರೆ, ಮಳವಳ್ಳಿ 790, ಮದ್ದೂರು 226, ಶ್ರೀರ೦ಗಪಟ್ಟಣ 1610, ನಾಗಮ೦ಗಲ 1261, ಕೆ ಆರ್ ಪೇಟೆ 1896 ಮತ್ತು ಕೆ ಆರ್ ನಗರದಲ್ಲಿ 815 ಮತಗಳು ಈ ಅಭ್ಯರ್ಥಿ ಪರವಾಗಿ ಚಲಾವಣೆಯಾಗಿದೆ. ಕಾ೦ಗ್ರೆಸ್ ಪಕ್ಷದ ಓಟ್ ಬ್ಯಾ೦ಕ್ ಆಗಿರುವ ತಮಿಳರ ಮತಗಳು ಈ ರೀತಿ ಹರಿದು ಹ೦ಚಿ ಹೋಗಿದ್ದು 'ಮ೦ಡ್ಯದ ಗ೦ಡು" ಅ೦ಬರೀಷ್ ಗೆ ಇನ್ನು ಎಷ್ಟು ಹೊಟ್ಟೆ ಉರಿದು ಹೋಗಿರಬೇಡ ?

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X