ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಟಿಟಿಇ ಉಗ್ರರು ನುಸುಳುವಿಕೆ ಶಂಕೆ : ಕಟ್ಟೆಚ್ಚರ

By Staff
|
Google Oneindia Kannada News

Bangalore on alert for possible infiltration of LTTE men
ಬೆಂಗಳೂರು, ಮೇ, 20 : ಶ್ರೀಲಂಕಾದ ಸೇನೆ ಉಗ್ರ ವಿ ಪ್ರಭಾಕರನ್ ಅವರನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಎಲ್ ಟಿಟಿಇ ಉಗ್ರರನ್ನು ರಾಜ್ಯದೊಳಗೆ ನುಸುಳದಂತೆ ಭಾರಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದು ಆದೇಶ ನೀಡಲಾಗಿದೆ ಎಂದರು. ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಹತ್ಯೆ ನಂತರ ಘಟನೆಯ ಪ್ರಮುಖ ರೂವಾರಿಗಳಾದ ಶುಭ, ಶಿವರಸನ್ ಸೇರಿ ಎಂಟು ಮಂದಿ ಎಲ್ ಟಿಟಿಇ ಉಗ್ರರು ಈ ಹಿಂದೆ ಬೆಂಗಳೂರಿನಲ್ಲಿ ಅಡಿಗಿಕೊಂಡಿದ್ದರು. ನಂತರ ಅವರನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಲಾಯಿತು. ಇದೀಗ ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರನ್ನು ಲಂಕಾ ಸೇನೆ ಕೊಂದು ಮುಗಿಸಿದೆ. ಎಲ್ ಟಿಟಿಇ ಅಷ್ಟೂ ಪ್ರದೇಶವನ್ನು ಲಂಕಾ ಸರಕಾರ ವಶಪಡಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಉಗ್ರರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದ್ದು, ಭಾರಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಆಚಾರ್ಯ ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X