ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಭಾಕರನ್ ಮೃತದೇಹ ಪತ್ತೆ ಹಚ್ಚಿದ ಲಂಕಾ ಸೇನೆ

By Staff
|
Google Oneindia Kannada News

Prabhakaran
ಕೊಲಂಬೋ, ಮೇ. 19 : ಎಲ್ ಟಿಟಿಇ ಮುಖ್ಯಸ್ಥ ವೇಲುಪಿಲೈ ಪ್ರಭಾಕರನ್ ಅವರ ಮೃತಪಟ್ಟಿರುವುದನ್ನು ಶ್ರೀಲಂಕಾ ಸೇನೆ ದೃಡಪಡಿಸಿದೆ. ಅವರ ಪತ್ತೆ ಹಚ್ಚಿರುವ ಸೇನೆ ಮಾಧ್ಯಮಗಳಿಗೆ ಅದರ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಎಲ್ ಟಿಟಿಇ ಬೆಂಬಲಿತ ವೆಬ್ ಸೈಟೊಂದರಲ್ಲಿ ಪ್ರಭಾಕರನ್ ಜೀವಂತವಾಗಿ, ಸುರಕ್ಷಿತವಾಗಿದ್ದಾರೆ ಎಂದು ವರದಿಯೊಂದು ಇಂದು ಬೆಳಗ್ಗೆ ಪ್ರಕಟವಾಗಿತ್ತು. ಕೆಲವೆ ಗಂಟೆಗಳಲ್ಲಿ ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರು ಸಂಘಟನೆಯ ಸಮವಸ್ತ್ರದಲ್ಲಿರುವ ಮೃತದೇಹವನ್ನು ನಂತಿಕಾದಲ್ ಪ್ರದೇಶದಲ್ಲಿ ಶ್ರೀಲಂಕಾ ಸೇನೆ ಪತ್ತೆ ಹಚ್ಚಿದೆ. ವೆಬ್ ಸೈಟ್ ವರದಿಗೆ ಯಾವುದೇ ಆಧಾರವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಲಂಕಾ ಸೇನೆ ಎಲ್ಲ ಮಾಧ್ಯಮಗಳಿಗೆ ಪ್ರಭಾಕರನ್ ಅವರ ಮೃತದೇಹವನ್ನು ಪತ್ತೆ ಹಚ್ಚಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಪ್ರಭಾಕರನ್ ಅವರ ತಲೆ ಹಾಗೂ ಕುತ್ತಿಗೆ ಮೇಲೆ ಗುಂಡು ಬಿದ್ದಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಈ ಕುರಿತು ಸಿಎನ್ಎನ್ -ಐಬಿಎನ್ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾದ ಮಿಲಿಟರಿ ಮುಖ್ಯಸ್ಥ ಉದಯ್ ನಾನಾಯಕ್ಕಾರ್, ಪ್ರಭಾಕರನ್ ಸತ್ತಿಲ್ಲ ಎನ್ನುತ್ತಿರುವುದು ಶುದ್ಧ ಸುಳ್ಳು. ಸೋಮವಾರ ಲಂಕಾ ಸೇನಾಪಡೆಯ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಭಾಕರನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆದರೆ, ಸೋಮವಾರ ವಿಡಿಯೋ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಇಂದು ನಂತಿಕಾದಲ್ ಪ್ರದೇಶದಲ್ಲಿ ಸೇನೆ ಕಾರ್ಯಾಚರಣೆ ನಡೆಸಿದ ಸೇನೆ ಪ್ರಭಾಕರನ್ ಮೃತದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X