ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ರ : 31 ಕ್ರಿಮಿನಲ್ ಸಂಸದರು ಆಯ್ಕೆ

By Staff
|
Google Oneindia Kannada News

ಲಖನೌ, ಮೇ. 18 : ಕ್ರಿಮಿನಲ್ ಅಭ್ಯರ್ಥಿಗಳನ್ನು ಸಂಸತ್ತಿಗೆ ಕಳುಹಿಸುವುದರಲ್ಲಿ ಈ ಬಾರಿಯೂ ಉತ್ತರಪ್ರದೇಶದ ಜನತೆ ಹಿಂದೆ ಬಿದ್ದಿಲ್ಲ. ಒಟ್ಟು 80 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಲ್ಲಿ ಕ್ರಿಮಿನಲ್ ಅಭ್ಯರ್ಥಿಗಳಿಗೆ ಇಲ್ಲಿನ ಜನತೆ ಮಣೆ ಹಾಕುವ ಮೂಲಕ ರಾಜ್ಯ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಕಳೆದ ಬಾರಿ ಇಲ್ಲಿಂದ 28 ಕ್ರಿಮಿನಲ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಉತ್ತರಪ್ರದೇಶದ ನ೦ತರ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದು, 23 ಸಂಸದರು ಆಯ್ಕೆಯಾಗಿದ್ದಾರೆ.

ಉತ್ತರಪ್ರದೇಶದ 31 ಕ್ರಿಮಿನಲ್ ಸಂಸದರ ಪೈಕಿ 22 ಸಂಸದರ ಮೇಲೆ ಗಂಭೀರ ಕ್ರಿಮಿನಲ್ ಆರೋಪವಿದೆಯೆಂದು ಡೆಮೊಕ್ರಾಟಿಕ್ ರಿಫಾರ್ಮ್ಸ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ. ಕಳೆದ ಬಾರಿ ಒಟ್ಟು ದೇಶದ ಸಂಸದರಲ್ಲಿ 128 ಮಂದಿ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದರೆ, ಈ ಬಾರಿ ಅದು 150 ಕ್ಕೆ ತಲುಪಿದೆ. ಉತ್ತರಪ್ರದೇಶದ 31 ಸಂಸದರ ಪೈಕಿ ಮೂರು ಜನ ಮೊದಲ ಹತ್ತು ಗರಿಷ್ಠ ಕ್ರಿಮಿನಲ್ ಮೊಕದ್ದಮೆ ಇರುವವರಲ್ಲಿ ಇದ್ದಾರೆ. ಇವರುಗಳು ಬಿಜೆಪಿಯ ವರುಣ್ ಗಾಂಧಿ, ಬಿಎಸ್ಪಿಯ ಕಪಿಲ್ ಮುನಿ ಮತ್ತು ಎಸ್ಪಿಯ ಬಾಲಕುಮಾರ್ ಪಟೇಲ್ ಸೇರಿದ್ದಾರೆ.

ಆರ್ ಜೆ ಡಿ ಯ ಲಾಲೂ ಪ್ರಸಾದ್ ಯಾದವ್ ಕೂಡ ಈ ಪಟ್ಟಿಯಲ್ಲಿ ಒಬ್ಬರು. ಬಿಜೆಪಿಯ 42, ಕಾಂಗ್ರೆಸ್ ಪಕ್ಷದ 41, ಸಮಾಜವಾದಿ ಪಕ್ಷದ 8 ಮತ್ತು ಬಿಎಸ್ಪಿಯ 6 ಕ್ರಿಮಿನಲ್ ಮೊಕದ್ದಮೆಯುಳ್ಳ ಸಂಸದರು ಈ ಬಾರಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X