ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ತಮಾನದಲ್ಲಿ ಕಂಡ ಭವಿಷ್ಯ

By Staff
|
Google Oneindia Kannada News

Kodihalli pontiff
ಮತ ಎಣಿಕೆಗೆ ಮುನ್ನ ಪಕ್ಷಗಳ ಮತ್ತು ಅಭ್ಯರ್ಥಿಗಳ ಕುರಿತು ಜ್ಯೋತಿಷಿಗಳು ನುಡಿದಿದ್ದ ಭವಿಷ್ಯದ ಫ್ಲ್ಯಾಷ್‌ಬ್ಯಾಕ್ ಇಲ್ಲಿದೆ...

*ಅಡ್ವಾಣಿಯವರಿಗೆ ಶನಿದಶೆ ಕಾಡುತ್ತಿದ್ದರೂ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಅವರು ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗಿವೆ. ಗುರು 11ನೇ ಮನೆಯಲ್ಲಿದ್ದು, ರಾಹು ಮತ್ತು ಕೇತುಗಳು 3 ಮತ್ತು 9ನೇ ಮನೆಯಲ್ಲಿವೆ ಮತ್ತು ಸಿಂಹ ರಾಶಿಯಲ್ಲಿ ಶನಿ ಹಾದುಹೋಗಲಿದೆ. ಗ್ರಹಗಳ ಸ್ಥಿತಿ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ ಅಡ್ವಾಣಿಯವರು ರಾಜನ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ಸ್ವಾಮೀಜಿ ಲೆಕ್ಕಾಚಾರ ಹಾಕಿದ್ದಾರೆ. ಆದರೆ, ನಿರೀಕ್ಷಿತ ಫಲ ದೊರಕಬೇಕೆಂದರೆ ಅಡ್ವಾಣಿಯವರು ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.-ಬೆಂಗಳೂರು ಮೂಲದ ಜ್ಯೋತಿಷಿ ಶಿವಲಿಂಗ ಸ್ವಾಮೀಜಿ

*'ಯಾವುದೇ ಅನುಮಾನವಿಲ್ಲದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ. ಏನೇ ಶತಪ್ರಯತ್ನ ಪಟ್ಟರೂ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯುವಲ್ಲಿ ಎನ್ ಡಿಎ ಮತ್ತೆ ವಿಫಲವಾಗಲಿದೆ. ಲಾಲ್‌ಕೃಷ್ಣ ಆಡ್ವಾಣಿ ನಿರಾಯಾಸವಾಗಿ ಗೆಲುವು ಸಾಧಿಸುತ್ತಾರೆ. ಆದರೆ, ಈ ಬಾರಿಯೂ ಅವರಿಗೆ ಪ್ರಧಾನಿ ಆಗುವ ಯೋಗ ಕೂಡಿ ಬರುವುದಿಲ್ಲ...'- ದೈವಜ್ಞ ಕೆ.ಎನ್.ಸೋಮಯಾಜಿ

*'ಬಿಜೆಪಿ ಇದೇ ಪರಿಸ್ಥಿತಿ ಕಾಯ್ದುಕೊಳ್ಳಲಿದೆ. ಕಾಂಗ್ರೆಸ್ ಹೆಚ್ಚುವರಿ ಸ್ಥಾನ ಪಡೆಯುವುದಿಲ್ಲ. ಉಳಿದ ಸ್ಥಾನಗಳನ್ನು ಜೆಡಿಎಸ್ ಪಡೆದುಕೊಳ್ಳಲಿದೆ. ಉಡುಪಿ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷಡಿ.ವಿ. ಸದಾನಂದ ಗೌಡ ಗೆಲ್ಲುತ್ತಾರೆ. ಮಂಗಳೂರು ಕ್ಷೇತ್ರದಲ್ಲಿ ನಳಿನ್ ಕುಮಾರ್ ತೀವ್ರ ಪೈಪೋಟಿಯ ನಡುವೆಯೂ ಗೆಲುವು ಸಾಧಿ ಸುತ್ತಾರೆ. ಮಿಕ್ಕಂತೆಯುಪಿಎ ಮತ್ತೆ ಆಡಳಿತ ನಡೆ ಸುವ ಸಾಧ್ಯತೆ ಇದೆ.'-ಚಂದ್ರಶೇಖರ ಸ್ವಾಮೀಜಿ

*.'ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 285ರಿಂದ290 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬರುವುದುಅಸಂಭವ. ತೃತೀಯ ಹಾಗೂ ಚತುರ್ಥ ರಂಗಗಳು ಅಧಿಕಾರಕ್ಕೆ ಬರುವುದಂತೂ ಕನಸಿನ ಮಾತು. ಕರ್ನಾಟಕದ 28 ಸ್ಥಾನಗಳಲ್ಲಿ ಬಿಜೆಪಿ 20, ಕಾಂಗ್ರೆಸ್6, ಜೆಡಿಎಸ್ 2 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿವೆ. '-ಡಾ. ವಿಷ್ಣು ಭಟ್

*'ಮಹಿಳೆಯೊಬ್ಬರು ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಮಹಿಳೆಗೆ ಸಿಗಲಿರುವ ಅವಕಾಶವನ್ನು ಆಕೆ ತಾನಾಗಿಯೇ ನಿರಾಕರಿಸಿದರೆ ಮಾತ್ರ ಪುರುಷರಿಗೆ ಪ್ರಧಾನಿಯೋಗ. ಈತನಕ ಸರಕಾರ ನಡೆಸಿದ ಯುಪಿಎ ಕೂಟದಲ್ಲಿನ ಒಡಕು ಬೇರೆಯವರಿಗೆ ವರದಾನವಾಗಲಿದೆ. ಆದರೆ, ಕಾಂಗ್ರೆಸ್ ಸಹಕಾರ ಇಲ್ಲದೆ ಸರಕಾರ ರಚನೆ ಕಷ್ಟ . ಎನ್‌ಡಿಎ ಯಥಾಸ್ಥಿತಿ ಕಾಯ್ದುಕೊಳ್ಳುವ ಲಕ್ಷಣವಿದೆ.' - ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

*'ಈ ಚುನಾವಣೆಯಲ್ಲಿ ಮಹಿಳೆಯರ ಪ್ರಾಬಲ್ಯ ಸರಕಾರ ರಚನೆಯಲ್ಲಿ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಬೆಂಬಲಿತ ತೃತೀಯ ರಂಗವು ಸರಕಾರವನ್ನು ರಚಿಸಬಹುದು. ಇಲ್ಲವೆ ಕಾಂಗ್ರೆಸ್ ಪಕ್ಷವು ಇತರೆ ಪ್ರಾಂತೀಯ ಪಕ್ಷಗಳ ಸಹಾಯದಿಂದ ಸರಕಾರ ರಚಿಸಿ, ಮನಮೋಹನ್ ಸಿಂಗ್ ಅವರೇ ಮತ್ತೆ ಪ್ರಧಾನಿ ಆಗಬಹುದು. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ. ಶಿವಮೊಗ್ಗದ ಜ್ಯೋತಿಷಿ ಸೀತಾರಾಮಯ್ಯ ಕೊಟ್ಟಂತೆ ಬಂಗಾರಪ್ಪನವರ ಜಾತಕ ನಿಖರವಾಗಿದ್ದರೆ (ಜನ್ಮದಿನಾಂಕ ಮತ್ತು ಸಮಯ ಅಕ್ಟೋಬರ್ 27,1933, ರಾತ್ರಿ 2.09) ಶೇಕಡ 3ರಷ್ಟು ಹೆಚ್ಚಿನ ಮತಗಳಿಂದ ಬಂಗಾರಪ್ಪ ವಿಜಯಿ ಆಗುವರು.ಮಾರ್ಗರೆಟ್ ಆಳ್ವರಿಗೆ ಕೇಂದ್ರದಲ್ಲಿ ಉನ್ನತ ಹುದ್ದೆ ಸಿಗುವ ಲಕ್ಷಣಗಳಿವೆ.-ಶಂಕರ್ ಜಿ. ಹೆಗಡೆ , ಬೆಂಗಳೂರು

*'ಆಡಳಿತ ಪಕ್ಷವನ್ನು ಸೂಚಿಸಲು ಸ್ತ್ರೀ ರಾಜಕಾರಣಿಗಳೇ ಪ್ರಮುಖರಾಗುವರು. ಅವರೇ ಸೋ ಮ ಜ'. ಇಲ್ಲಿ ಸೋ' ಎಂದರೆ ಸೋನಿಯಾ ಗಾಂಧಿ, ಮ' ಎಂದರೆ ಮಾಯಾವತಿಮತ್ತು ಜ' ಎಂದರೆ ಜಯಲಲಿತಾ. ಇನ್ನು, ರಾಜ್ಯದಲ್ಲಿ ಬಿಜೆಪಿ 15ರಿಂದ 20 ಸ್ಥಾನಗಳನ್ನು ಪಡೆಯಬಹುದು. ರಾಜ್ಯದ ರಾಜಕೀಯದಲ್ಲಿ ಅಶೋ ಕಾ' ಎಂಬ ಸ್ತ್ರೀಯರ ಪ್ರಭಾವ ಎದ್ದು ತೋರುತ್ತಿದೆ' -ಜ್ಯೋತಿಷ್ಯ ರತ್ನ ಎಂ.ರತ್ನರಾಜ್ ಜೈನ್, ಬೆಂಗಳೂರು

*ಬಂಗಾರಪ್ಪ ಅವರ ಜನ್ಮ ದಿನಾಂಕ ಪರಿಶೀಲಿಸಿದರೆ ಬುಧ 4ನೇ ಮನೆಯಲ್ಲಿದ್ದು, ಸಿಂಹಾಸನ ಸ್ಥಾನದಲ್ಲಿ ಕುಳಿತಿದ್ದಾನೆ. ಶನಿ 6ನೇ ಅಧಿಪತಿ . ಈತ 6ನೇ ಮನೆಯಲ್ಲಿದ್ದು, ಪ್ರತಿಸ್ಪರ್ಧಿಗಳ ಮೇಲೆ ಜಯ ಸಾಧಿಸುವುದರ ಸೂಚಕ. ಹಾಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಂಗಾರಪ್ಪ ಗೆಲುವು ಸಾಧ್ಯತೆ
ಬಲವಾಗಿದೆ. ಬಿ.ವೈ. ರಾಘವೇಂದ್ರ ಅವರ ಜನ್ಮ ಕುಂಡಲಿ ಪ್ರಕಾರ, ಅವರಿಗೆ ಗೆಲುವಿನ ಸಾಧ್ಯತೆ ತೀರಾ ಕಡಿಮೆ'.-ಆರ್. ಸೀತಾರಾಮಯ್ಯ, ಶಿವಮೊಗ್ಗ

ಅಡ್ವಾಣಿ ಪ್ರಧಾನಿ ಆಗಲ್ಲ, ಕೋಡಿಮಠ ಶ್ರೀಗಳು
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X