ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲರಿಯದ ಸೇನಾಪತಿಗೆ ಯುದ್ಧದಲ್ಲಿ ಸೋಲು

By Staff
|
Google Oneindia Kannada News

ನವದೆಹಲಿ, ಮೇ. 16 : ಪ್ರಸ್ತುತ ಮಹಾಯುದ್ಧದಲ್ಲಿ ಸೋತಿರುವ ಬಿಜೆಪಿ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಸ್ವಕ್ಷೇತ್ರ ಗಾಂಧಿನಗರದಲ್ಲಿ ಕಳೆದ ಸಲಕ್ಕಿಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಸಲ ಅಡ್ವಾಣಿ 2,17,138 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಈ ಸಲ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಪಟೇಲ್ ವಿರುದ್ಧ ಕೇವಲ 1 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಸತತ ಐದು ಬಾರಿಗೆ 1991, 1998, 1999, 2004 ಮತ್ತು 2009ರ ಲೋಕಸಭೆ ಚುನಾವಣೆಯಲ್ಲಿ ಅಡ್ವಾಣಿ ಗಾಂಧಿನಗರ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ಗಾಂಧಿ ನಗರ ಕ್ಷೇತ್ರಗಲ್ಲಿ ಪಟೇಲ್ ಜನಾಂಗ ಹೆಚ್ಚಾಗಿತ್ತು. ಇದನ್ನು ಗಮನದಲ್ಲಿರಿಸಿಕೊಂಡ ಕಾಂಗ್ರೆಸ್ ಪಕ್ಷ ಸುರೇಶ್ ಪಟೇಲ್ ಅವರನ್ನು ಅಖಾಡಕ್ಕಿಳಿಸಿತ್ತು. ಗಾಂಧಿನಗರದಲ್ಲಿ ಗೆಲುವಿನ ಮುಂದುವರೆಸಿದ ಅಡ್ವಾಣಿ ಅವರಿಗೆ ಪ್ರಧಾನಿ ಯೋಗವನ್ನು ದೇಶದ ಮತದಾರ ತಂದಕೊಡಲಿಲ್ಲ ಎನ್ನುವುದು ವಿಶೇಷ.

(ಏಜನ್ಸೀಸ್)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X