ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಕೈಕೊಡಲು ನಿತೀಶ್ ಕುಮಾರ್ ತಯಾರಿ

By Staff
|
Google Oneindia Kannada News

Nitish Kumar
ಪಾಟ್ನಾ, ಮೇ. 15 : ಕಳೆದ ಐದು ವರ್ಷಗಳಿಂದ ಎನ್ ಡಿಎದಲ್ಲಿ ಗುರುತಿಸಿಕೊಂಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಡೆ ಫಲಿತಾಂಶ ಹತ್ತಿರವಾಗುತ್ತಿದ್ದಂತೆಯೇ ನಿಗೂಢವಾಗತೊಡಗಿದೆ. ಲೂಧಿಯಾನಾದಲ್ಲಿ ಎನ್ ಡಿಎ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ನಿತೀಶ್, ಇಂದು ರಾಗ ಬದಲಿಸಿದ್ದಾರೆ. ಕೇಂದ್ರ ಸರಕಾರ ರಚನೆಯಲ್ಲಿ ಬಿಹಾರದ ಪಾತ್ರ ಮುಖ್ಯವಾಗಿರುವ ಬೆನ್ನೆಲ್ಲೇ ಇಂದು ಪತ್ರಿಕಾಗೋಷ್ಠಿ ನಡೆಸಿ ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಯಾರು ನೀಡುತ್ತಾರೋ ಅವರಿಗೆ ನಮ್ಮ ಬೆಂಬಲ ನೀಡುವುದಾಗಿ ಘೋಷಿಸುವ ಮೂಲಕ ಬಿಜೆಪಿ ನಾಯಕರಿಗೆ ಆಘಾತ ನೀಡಿದ್ದಾರೆ.

ಯುಪಿಎದಿಂದ ಲಾಲು ಹೊರಹೋದಾಗಿನಿಂದ ನಿತೀಶ್ ಕುಮಾರ್ ಅವರಿಗೆ ಕಾಂಗ್ರೆಸ್ ಗಾಳಹಾಕಿದೆ. ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಅವರಂತೂ ಬಿಹಾರ ಮಾದರಿ ರಾಜ್ಯವಾಗಿದೆ. ನಿತೀಶ್ ಕುಮಾರ್ ಅವರ ಅಭಿವೃದ್ಧಿ ಕಾರ್ಯಗಳು ಪ್ರಶಂಸನೀಯ ಎಂದು ಬಣ್ಣಿಸಿದ್ದರು. ಅಲ್ಲಿಂದ ಶುರುವಾದ ಕೈ ಪಾಳೆಯದ ಗಾಳ, ಇಂದಿಗೂ ಮುಂದುವರೆದಿದೆ. ನಂತರ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಪ್ರತಿ ಭಾಷಣದಲ್ಲಿ ನಿತೀಶ್ ಕುಮಾರ್ ಅವರನ್ನು ಹೊಗಳುತ್ತಾ ಹೋದರು. ನಿತೀಶ್ ಜಾತ್ಯಾತೀತ ವ್ಯಕ್ತಿ. ಅವರು ಯುಪಿಎದಲ್ಲಿರೆ ಉತ್ತಮ ಎನ್ನುವವರೆಗೂ ಮನಮೋಹನ್ ಸಿಂಗ್ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಗಾಳ ಅರಿತ ಎನ್ ಡಿಎ ಮುಖಂಡರು ಒಲೈಕೆಗೆ ಮುಂದಾದರು. ನಿತೀಶ್ ಎನ್ ಡಿಎ ಪರವಿದ್ದಾರೆ. ಅವರು ನಮ್ಮನ್ನು ಬಿಟ್ಟು ಎಂದಿಗೂ ಹೋಗುವುದಿಲ್ಲ ಎಂದು ಹೇಳತೊಡಗಿದರು. ನರೇಂದ್ರ ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದ ನಿತೀಶಕುಮಾರ್, ಲೂಧಿಯಾನಾದಲ್ಲಿ ನಡೆದ ಎನ್ ಡಿಎ ಶಕ್ತಿ ಪ್ರದರ್ಶನದಲ್ಲಿ ಪಾಲ್ಗೊಂಡು ಕೈ ಪಾಳೆಯದ ನಾಯಕರಿಗೆ ನಿರಾಶೆಗೊಳಿಸಿದರು. ಆದರೂ ಬಿಡದ ಕಾಂಗ್ರೆಸ್ ಮಂದಿ ನಿತೀಶಕುಮಾರ್ ಅವರನ್ನು ತಮ್ಮತ್ತ ಸೆಳೆದುಕೊಳ್ಳುವ ಕಾಯಕವನ್ನು ಮುಂದುವರೆಸಿದರು. ಎರಡು ರಾಷ್ಟ್ರೀಯ ಪಕ್ಷಗಳು ಕಸರತ್ತು ಅರಿತ ನಿತೀಶ್ ಕುಮಾರ್ ಹೊಸ ನಾಟಕ ಶುರು ಮಾಡಿದ್ದಾರೆ. ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಯಾರು ನೀಡುತ್ತಾರೋ ಅವರಿಗೆ ಬೆಂಬಲ ಎಂದು ಹೇಳುವ ಮೂಲವಕ ಬಿಜೆಪಿಗೆ ಆಘಾತ ನೀಡಿದ್ದರೆ, ಯುಪಿಎಗೆ ಹತ್ತಿರವಾಗುವ ಸುಳಿವನ್ನು ನೀಡಿದ್ದಾರೆ.

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ಯುಪಿಎ ಸರಕಾರ ನಿರಾಕರಿಸಿತ್ತು. ಇದೀಗ ಇದೇ ವಿಷಯವನ್ನು ಮುಂದು ಮಾಡಿರುವ ನಿತೀಶಕುಮಾರ್ ಬೇಡಿಕೆಗೆ ಪ್ರಧಾನಿ ಮನಮೋಹನ್ ಸಿಂಗ್ ಅಸ್ತು ಎಂದಿರುವ ಸುದ್ದಿ ದೆಹಲಿಯ ಕಾಂಗ್ರೆಸ್ ಕಚೇರಿಯಿಂದ ಹೊರಬಿದ್ದಿದೆ ಎನ್ನಲಾಗಿದೆ.

(ಏಜನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X