ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.31 ರೊಳಗೆ ರೇಸ್‌ಕೋರ್ಸ್ ಸ್ಥಳಾಂತರ

By Staff
|
Google Oneindia Kannada News

ಬೆಂಗಳೂರು, ಮೇ. 15 : ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ರೇಸ್‌ಕೋರ್ಸ್ ಸ್ಥಳಾಂತರಕ್ಕೆ ಚಾಲನೆ ದೊರೆತಿದ್ದು, ಡಿಸೆಂಬರ್ 31 ರೊಳಗೆ ರೇಸ್‌ಕೋರ್ಸ್‌ನ್ನು ಸ್ಥಳಾಂತರಿಸಲು ಬೆಂಗಳೂರು ಟರ್ಫ್ ಕ್ಲಬ್‌ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆಯೆಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ರೇಸ್‌ಕೋರ್ಸ್ ಸ್ಥಳಾಂತರದ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ನಂತರ ಮಾತನಾಡುತ್ತಿದ್ದ ಅವರು, ರೇಸ್‌ಕೋರ್ಸ್‌ಗಾಗಿ ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡಜಾಲದ ಬಳಿ 100 ಎಕರೆ ಜಾಗವನ್ನು ಗುರುತಿಸಲಾಗಿದೆ. ತಾಂತ್ರಿಕ ಅಡಚಣೆಯನ್ನು ನಿವಾರಿಸಲು ಅಥವಾ ಅಗತ್ಯ ಕಂಡು ಬಂದರೆ ಪರ್ಯಾಯ ಸ್ಥಳವನ್ನು ಒದಗಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಟರ್ಫ್ ಕ್ಲಬ್‌ಗೆ ಕೂಡಲೇ ಸಹಕಾರ ನೀಡುವರೆಂದು ತಿಳಿಸಿದರು.

ರೇಸ್‌ಕೋರ್ಸ್‌ನ್ನು ಸ್ಥಳಾಂತರಿಸಲು ಬೆಂಗಳೂರು ಟರ್ಫ್ ಕ್ಲಬ್‌ಗೆ 1968 ರಲ್ಲಿ ಜಕ್ಕೂರ್ ಬಳಿ ಸರ್ಕಾರ ಸ್ಥಳ ಒದಗಿಸಿತ್ತು, ಆದರೆ ಟರ್ಫ್ ಕ್ಲಬ್ ರೇಸ್‌ಕೋರ್ಸ್‌ನ್ನು ಸ್ಥಳಾಂತರಿಸದ ಕಾರಣ ಸರ್ಕಾರ ಆ ಜಾಗವನ್ನು ಹಿಂಪಡೆಯಿತು. ವಿಧಾನಸೌಧದ ಸುತ್ತಮುತ್ತ ವಾಹನ ಸಂಚಾರದ ದಟ್ಟಣೆ ಅಧಿಕವಾಗಿರುವುದರಿಂದ ಡಿಸೆಂಬರ್ 31 ರ ನಂತರ ಯಾವುದೇ ಕಾರಣಕ್ಕೆ ರೇಸ್‌ಕೊರ್ಸ್‌ಅನ್ನು ಹಾಲಿ ಸ್ಥಳದಲ್ಲಿ ಮುಂದುವರೆಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

(ದಟ್ಸ್ ಕನ್ನ ವಾರ್ತೆ)

ಬಿಎಂಟಿಸಿ ಇಂಟಿಗ್ರೇಟೆಡ್ ಪಾಸ್ ಗೆ ಚಾಲನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X