ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮುವಾದಿ ಬಿಜೆಪಿಗೆ ಬೆಂಬಲವಿಲ್ಲ, ಕಾರಟ್

By Staff
|
Google Oneindia Kannada News

Prakash Karat
ನವದೆಹಲಿ, ಮೇ. 14 : ಖಾಸಗಿ ವಾಹಿನಿಗಳ ನಡೆಸಿದ ಚುನಾವಣೆ ನಂತರ ಸಮೀಕ್ಷೆಯಲ್ಲಿ ಸರಕಾರ ರಚಿಸಲು ತೃತೀಯ ರಂಗದ ಪಾತ್ರ ಅತೀ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಕಟಿಸಿವೆ. ಎಡಪಕ್ಷಗಳು ಸೇರಿ ತೃತೀಯ ರಂಗದಲ್ಲಿರುವ ಪಕ್ಷಗಳ ಮುಖಂಡರು ಮೇ 16ರ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಒಂದಂತೂ ಸತ್ಯ ಯಾವ ಕಾರಣಕ್ಕೂ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವುದು ಅಸಾಧ್ಯ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದು ಎಡಪಕ್ಷಗಳ ಏಕೈಕ ಅಧ್ಯತೆ ಎಂದರು. ಕಾಂಗ್ರೆಸ್ ಪಕ್ಷದ ನೀತಿಗಳು ಅಪಾಯಕಾರಿಯಾಗಿವೆ. ಮನಮೋಹನ್ ಸಿಂಗ್ ಅವರೊಂದಿಗೆ ವೈಯಕ್ತಿಕ ಹಗೆತನವೇನೂ ಇಲ್ಲ. ಇಷ್ಟಾಗಿಯೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದೊಂದಿಗೆ ನಮ್ಮ ಸ್ನೇಹ ಹಳಸಿದೆ. ಇವರಿಗೂ ಕೂಡಾ ಬೆಂಬಲ ನೀಡುವ ಮಾತೇ ಇಲ್ಲ ಎಂದು ಕಾರಟ್ ಸ್ಪಷ್ಟಪಡಿಸಿದರು.

ತೃತೀಯ ರಂಗದ ಸರಕಾರ ರಚನೆಗೆ ಕಾಂಗ್ರೆಸ್ ಪಕ್ಷವೇ ಬೆಂಬಲ ನೀಡಲಿ ಎಂದ ಕಾರಟ್, ಒಂದು ವೇಳೆ ಕಾಂಗ್ರೆಸ್ ಪಕ್ಷ ತೃತೀಯ ರಂಗಕ್ಕೆ ಬೆಂಬಲ ನೀಡಿದಿದ್ದಲ್ಲಿ ಕೋಮುವಾದಿಗಳನ್ನು ದೂರವಿಡುವ ಕಾರಣಕ್ಕಾಗಿ ತೃತೀಯ ರಂಗದ ಮುಖಂಡರ ಸಭೆ ಕರೆದು ಚರ್ಚೆ ನಡೆಸಿ ಮುಂದಿನ ಕ್ರಮ ನಿರ್ಧಾರ ಪ್ರಕಟಿಸಲಾಗುವುದು ಎಂದರು. ಫಲಿತಾಂಶದ ನಂತರ ಸಂಖ್ಯಾಬಲದ ಆಧಾರದ ಮೇಲೆ ಈ ಎಲ್ಲ ವಿಷಯಗಳು ಆಧಾರವಾಗಿವೆ. ಮೇ 18 ಕ್ಕೆ ತೃತೀಯ ರಂಗದ ಸಭೆ ಕರೆಯಲಾಗಿದೆ ಎಂದು ಕಾರಟ್ ಹೇಳಿದರು.

(ಏಜನ್ಸೀಸ್)

ಕುಮಾರ್-ಸೋನಿಯಾ ಭೇಟಿ : ಗೌಡ ಸ್ಪಷ್ಟನೆ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X