ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಪ್ರಚಾರಕ್ಕೆ ಜೈಹೋ ರೆಹಮಾನ್ ಬೇಸರ

By Staff
|
Google Oneindia Kannada News

A R Rahman
ಚೆನ್ನೈ, ಮೇ. 13 : ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಜೈಹೋ ಹಾಡನ್ನು ಕಾಂಗ್ರೆಸ್ ಪಕ್ಷ ತನ್ನ ಚುನಾವಣೆ ಪ್ರಚಾರಕ್ಕಾಗಿ ಬಳಸಿಕೊಂಡಿರುವುದಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಭಾರತಕ್ಕೆ ತಂದುಕೊಟ್ಟ ಹೆಗ್ಗಳಿಕೆ ಹೊಂದಿರುವ ಸಂಗೀತ ನಿರ್ದೇಶಕ ಎ ಆರ್ ರೆಹೆಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ಆಸ್ಕರ್ ಪ್ರಶಸ್ತಿ ಪಡೆದಿರುವಂತ ಚಿತ್ರದ ಹಾಡಿನ ಹಕ್ಕು ನೀಡಿರುವುದು ಬೇಸರ ಸಂಗತಿ ಎಂದು ಅವರು ವಿಷಾಧಿಸಿದ್ದಾರೆ.

ಚೆನ್ನೈನಲ್ಲಿ ಇಂದು ಮತ ಚಲಾಯಿಸಿದ ಅವರು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನನಗೆ ಜೈಹೋ ಹಾಡಿನ ಹಕ್ಕನ್ನು ರಾಜಕೀಯ ಪಕ್ಷವೊಂದು ಪಡೆದಿದೆ ಎನ್ನುವುದು ಗೊತ್ತಿರಲಿಲ್ಲ. ನಂತರ ನನಗೆ ತಿಳಿಯಿತು. ಜನರ ಮನರಂಜನೆಗಾಗಿ ಸಂಗೀತ ನಿರ್ದೇಶನ ಮಾಡಲಾಗಿತ್ತೆ ಹೊರತು, ರಾಜಕೀಯ ಪಕ್ಷದ ಚುನಾವಣೆ ಪ್ರಚಾರಕ್ಕಾಗಿ ಅಲ್ಲ. ಜನಸೇವೆಯನ್ನು ಮರೆತಿರುವ ಜನನಾಯಕರು ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ಇಂತವರ ಕೈಗೆ ಜೈಹೋ ಎಂಬ ಅದ್ಭುತ ಹಾಡಿನ ಹಕ್ಕು ನೀಡಿರುವುದು ಬೇಸರದ ಸಂಗತಿಯೇ. ಸರಕಾರ ಮುಂದಿನ ದಿನಗಳಲ್ಲಿ ಜನರ ಶೋಷಣೆ ಮಾಡುವುದನ್ನು ಕೈಬಿಟ್ಟು ಪ್ರಾಮಾಣಿಕವಾದ ಜನಸೇವೆ ಸೇವೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಜೈಹೋ ಹಾಡಿನ ಹಕ್ಕು ಕಾಂಗ್ರೆಸ್ ಪಕ್ಷ ತನ್ನ ಚುನಾವಣೆ ಪ್ರಚಾರದಲ್ಲಿ ಬಳಸಿಕೊಳ್ಳಲು ಅದರ ಹಕ್ಕು ಪಡೆದಿತ್ತು. ಮೊದಮೊದಲು ಇದರ ಉಪಯೋಗ ಪಡೆದುಕೊಂಡಿತಾದರೂ ನಂತರದ ದಿನಗಳಲ್ಲಿ ಕಾಂಗ್ರೆಸ್ ಜೈಹೋ ಹಾಡನ್ನು ಕೈಬಿಟ್ಟಿತು. ಹಾಲಿವುಡ್ ನಿಂದ ಅನೇಕ ಆಫರ್ ಗಳು ಬಂದಿವೆ. ಮುಂದಿನ ದಿನಗಳಲ್ಲಿ ಇಂಗ್ಲಿಷ್ ಚಿತ್ರಗಳು ಸೇರಿ ವಿವಿಧ ಭಾಷೆಯ ಚಿತ್ರಗಳಿಗೆ ಕೆಲಸ ಮಾಡಬೇಕಾಗಿದೆ ಎಂದು ರೆಹೆಮಾನ್ ಹೇಳಿದರು.

(ಏಜನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X