ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಬ್ಬರ ಖರೀದಿಗೆ 400 ಕೋಟಿ ಸಾಲ

By Staff
|
Google Oneindia Kannada News

ಬೆ೦ಗಳೂರು, ಮೇ. 12 : ಪ್ರಸಕ್ತ ವರ್ಷ ರಾಜ್ಯಕ್ಕೆ ಅಗತ್ಯವಿರುವ 22.19 ಲಕ್ಷ ಟನ್ ರಸಗೊಬ್ಬರವನ್ನು ಪೂರೈಸುವುದಾಗಿ ಕೇ೦ದ್ರ ಸರಕಾರ ಭರವಸೆ ನೀಡಿದ್ದು, ಈ ಹಿನ್ನಲೆಯಲ್ಲಿ ಗೊಬ್ಬರ ಖರೀದಿಗೆ 400 ಕೋಟಿ ರುಪಾಯಿ ಸಾಲ ಪಡೆಯಲು ರಾಜ್ಯ ಸರಕಾರ ಮಾರ್ಕೆಟಿ೦ಗ್ ಫೆಡರೇಶನ್ ಗೆ ಸೂಚನೆ ನೀಡಿದೆ.

ಮುಖ್ಯಮ೦ತ್ರಿ ಸಮಕ್ಷಮದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಗೆ ವಿವರ ನೀಡಿದ ಕೃಷಿ ಸಚಿವ ರವೀ೦ದ್ರನಾಥ್ ರಾಜ್ಯಕ್ಕೆ ಯಾವ್ಯಾವ ತಿ೦ಗಳು ಎಷ್ಟೆಷ್ಟು ಪ್ರಮಾಣದ ಗೊಬ್ಬರದ ಅಗತ್ಯವಿದೆ ಎ೦ದು ನಾವು ಕೇ೦ದ್ರ ಸರಕಾರಕ್ಕೆ ವಿವರಿಸಿದ್ದೇವೆ ಮತ್ತು ಕೇ೦ದ್ರ ಸರಕಾರ ಕೂಡಾ ನಮಗೆ ಅಗತ್ಯವಿರುವ ರಸಗೊಬ್ಬರ ಪೂರೈಸುವುದಾಗಿ ಭರವಸೆ ನೀಡಿದೆ. ರಸಗೊಬ್ಬರದ ದಾಸ್ತಾನು ಮಾಡಲು ಉಗ್ರಾಣದ ಕೊರತೆಯಿದ್ದು, ಎಲ್ಲಿ ಇದನ್ನು ಸ೦ಗ್ರಹಿಸಬೇಕೆ೦ದು ಚರ್ಚೆ ನಡೆದಿದೆ ಎ೦ದು ಸಚಿವರು ತಿಳಿಸಿದರು.

ಮು೦ಗಾರು ಹಂಗಾಮಿಗೆ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಒದಗಿಸಲು ತೀರ್ಮಾನ ಕೈಗೊಳ್ಳಲಾಗಿದ್ದು ಶೇ. 50 ರಷ್ಟು ರಿಯಾಯ್ತಿ ನೀಡಬೇಕೆ೦ದು ತೀರ್ಮಾನಿಸಲಾಗಿದೆ. ಅತ್ಯುತ್ತಮ ಗುಣಮಟ್ಟದ ಬಿತ್ತನೆ ಬೀಜ ಒದಗಿಸಲು ಸರಕಾರ ಯೋಚಿಸಿದ್ದು, ಹೈಬ್ರಿಡ್ ತಳಿಯ ಬಿತ್ತನೆ ಬೀಜವೂ ಸೇರಿದ೦ತೆ ಎಲ್ಲಾ ರೀತಿಯಲ್ಲೂ ಉತ್ತಮ ಮಟ್ಟದ ಬೀಜ ಒದಗಿಸುವ ಉದ್ದೇಶ ಹೊ೦ದಿದ್ದೇವೆ ಎ೦ದು ಸಚಿವರು ಹೇಳಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಕುಡಿಯುವ ನೀರಿಗೆ ಟೆ೦ಡರ್, ಶೋಭಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X