ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೃತೀಯರಂಗ ತೂತು ಬಿದ್ದ ಮನೆ, ಪಿಎಂ

By Staff
|
Google Oneindia Kannada News

Manmohan Singh
ಲೂಧಿಯಾನಾ, ಮೇ. 11 : ಅಂತಿಮ ಹಂತದ ಚುನಾವಣೆಯ ಕೊನೆಯ ದಿನವಾದ ಸೋಮವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬಹುಸಂಖ್ಯಾತ ಸಿಖ್ ಸಮುದಾಯವಿರುವ ಪಂಜಾಬ ಹಾಗೂ ಹರಿಯಾಣ ರಾಜ್ಯಗಳಲ್ಲಿ ಚುನಾವಣೆ ಪ್ರಚಾರ ನಡೆಸಿದರು. ಲೂಧಿಯಾನಾ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನೀಷ್ ತಿವಾರಿ ಪರ ಪ್ರಚಾರ ಕಾರ್ಯನಡೆಸಿದ ಸಿಂಗ್, ನಂತರ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ತೃತೀಯ ರಂಗವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತೃತೀಯರಂಗದ ವಿರುದ್ಧ ವಾಗ್ದಾಳಿ ನಡೆಸಿದ ಸಿಂಗ್, ತೃತೀಯ ರಂಗ ಎನ್ನುವುದು ಒಡೆದ ಮನೆ. ಈ ರಂಗದಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದರು. ನಂತರ ಎನ್ ಡಿಎದತ್ತ ವಾಗ್ಬಾಣ ಶುರು ಮಾಡಿದ ಸಿಂಗ್, ಬಿಜೆಪಿ ಪಕ್ಷದ ಕೋಮುವಾದಿ ಕೃತ್ಯಗಳಿಂದ ಬೇಸತ್ತು ಬಿಜೆಡಿ ಹಾಗೂ ತೆಲುಗು ದೇಶಂ ಪಕ್ಷಗಳು ಎನ್ ಡಿಎ ಒಕ್ಕೂಟದಿಂದ ಹೊರನಡೆದಿವೆ. ಫಲಿತಾಂಶದ ನಂತರ ತೃತೀಯ ರಂಗದ ಗತಿಯನ್ನೇ ಎನ್ ಡಿಎ ಅನುಭವಿಸಲಿದೆ ಎಂದರು.

ಕಾಂಗ್ರೆಸ್ ಪಕ್ಷ ಫಲಿತಾಂಶದ ನಂತರ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇದರಲ್ಲಿ ಯಾರಿಗೂ ಸಂಶಯಬೇಡ. ದೇಶ ಮುನ್ನೆಡಸಲು ಕಾಂಗ್ರೆಸ್ ಪಕ್ಷವೇ ಸೂಕ್ತ. ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದಾರೆ. ಈ ಸಮುದಾಯಕ್ಕಾಗಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಕೆಲಸ ಮಾಡಲಿದೆ ಎಂದು ಸಿಂಗ್ ಭರವಸೆ ನೀಡಿದರು.

ಕಾಂಗ್ರೆಸ್ ಪಕ್ಷ ಸರಕಾರ ರಚನೆಗೆ ಬೇಕಿರುವ ಸಂಖ್ಯೆಗಳನ್ನು ಪಡೆಯಲಿದೆ. ಎಡಪಕ್ಷಗಳತ್ತ ಮುಖ ಮಾಡುವ ಪ್ರಶ್ನೆಯೇ ಇಲ್ಲ. ಸದ್ಯದ ಯಪಿಎ ಒಕ್ಕೂಟದ ಮೂಲಕವೇ ಕಾಂಗ್ರೆಸ್ ನೇತೃತ್ವದ ಸರಕಾರ ದಿಲ್ಲಿಯ ಅಧಿಕಾರ ಗದ್ದುಗೆ ಏರಲಿದೆ ಎಂದು ಹೇಳಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತ್ಯಾತೀತ ವ್ಯಕ್ತಿ ಎಂದ ಸಿಂಗ್, ಆದರೆ, ಲೂಧಿಯಾನದಲ್ಲಿ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಜಕಾರಣದಲ್ಲಿ ಧರ್ಮ ತರಬಾರದು. ಧರ್ಮ ತರುತ್ತಿರುವ ಬಿಜೆಪಿಯಂಥ ಪಕ್ಷಗಳನ್ನು ಅಧಿಕಾರದಿಂದ ದೂರ ಇಡಬೇಕು. ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಎಂದಿಗೂ ಬಿಡುವುದಿಲ್ಲ ಎಂದು ಸಿಂಗ್ ಹೇಳಿದರು. 1984 ರಲ್ಲಿ ಸಿಂಗ್ ಹತ್ಯಾಕಾಂಡ ಮೃತಪಟ್ಟವರಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಸೌಲಭ್ಯ ನೀಡಿದೆ. ಪರಿಹಾರಧನವನ್ನು ಸಕಾಲದಲ್ಲಿಯೇ ವಿತರಿಸಲಾಗಿದೆ ಎಂದು ಮನಮೋಹನ್ ಸಿಂಗ್ ಹೇಳಿದರು.

(ಏಜೆನ್ಸೀಸ್)

ಅಡ್ವಾಣಿ ಪ್ರಧಾನಿ ಆಗಲ್ಲ, ಕೋಡಿಮಠ ಶ್ರೀಗಳು
2010ಕ್ಕೆ ಮತ್ತೆ ಲೋಕಸಭೆ ಚುನಾವಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X