ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಸಂಸ್ಥೆಯಿಂದ ಅಗ್ಗದ ದರದ ಮನೆ ನಿರ್ಮಾಣ

By Staff
|
Google Oneindia Kannada News

Ratan tata
ಮುಂಬೈ, ಮೇ. 7 : ಜನಸಾಮಾನ್ಯರಿಗೆ ಅಗ್ಗದ ಕಾರು ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಟಾಟಾ ಸಮೂಹ ಇನ್ನೊಂದು ಯೋಜನೆಗೆ ಕೈಹಾಕಿದ್ದು, ಮಧ್ಯಮ ವರ್ಗದ ಜನರಿಗಾಗಿ ಸುಲಭ ದರದಲ್ಲಿ ಮನೆ ನಿರ್ಮಿಸಲು ಮುಂದಾಗಿದೆ.

ಮುಂಬೈ ನಂತಹ ಮಹಾನಗರಿಯಲ್ಲಿ ಬಾಡಿಗೆ ಮನೆಯ ಮುಂಗಡವೇ ಐದಾರು ಲಕ್ಷ ರುಪಾಯಿ ತಲುಪಿರುವಾಗ 3.9 ಲಕ್ಷ ರುಪಾಯಿಯಿಂದ 6.7 ಲಕ್ಷ ರುಪಾಯಿಗೆ ಮನೆ ಕಟ್ಟಿಕೊಡಲು ಟಾಟಾ ಸಂಸ್ಥೆ ನಿರ್ಧರಿಸಿದೆ. ಮಧ್ಯಮ ವರ್ಗದ ಜನರ ಸ್ವಂತಮನೆ ಕನಸನ್ನು ನನಸು ಮಾಡಲು ಟಾಟಾ ಸಂಸ್ಥೆ ಸಹ ಸಂಸ್ಥೆ ಟಾಟಾ ಹೌಸಿಂಗ್ ಮುಂಬೈನ ಹೊರವಲಯದ ಬೊಯ್ಸರ್ ನಲ್ಲಿ ಸುಭಗೃಹ ನಿರ್ಮಾಣ ಮಾಡಲಿದೆ. ಮುಂಬೈ ನಂತರ ಬೆಂಗಳೂರು ಮತ್ತು ನವದೆಹಲಿಯಲ್ಲಿ ಇದೇ ಯೋಜನೆ ಆರಂಭವಾಗಲಿದೆ.

ಟಾಟಾ ಹೌಸಿಂಗ್ ನಿರ್ಮಿಸುವ ಮನೆಯಲ್ಲಿ ಒಂದು ಬೆಡ್ ರೂಂ, ಒಂದು ಹಾಲ್ ಮತ್ತು ಅಡುಗೆ ಮನೆ ಇರುವ ಮನೆಗೆ 3.9 ಲಕ್ಷ ರುಪಾಯಿಯಿಂದ 6.7 ಲಕ್ಷ ರುಪಾಯಿವರೆಗೆ (465 ಚದರಡಿ ವಿಸ್ತೀರ್ಣ) ದರ ನಿಗದಿಪಡಿಸಲಾಗಿದೆ. ಆದರೆ, ಇವು ಪ್ರತ್ಯಕ ಮನೆಗಳಲ್ಲ. ಅಪಾರ್ಟ್ ಮೆಂಟ್ ಮನೆಗಳಾಗಿವೆ. ಮುಂಬೈನ ಕೇಂದ್ರಸ್ಥಾನದಿಂದ 100 ಕಿಮೀ ದೂರವಿರುವ ಬೊಯ್ಸರ್ ನಲ್ಲಿ ನಿರ್ಮಿಸಲಾಗುತ್ತಿರುವ ಟೌನ್ ಶಿಪ್ 63 ಎಕರೆ ವಿಸ್ತೀರ್ಣ ಹೊಂದಿದ್ದು, ಇಲ್ಲಿ ಆಟದ ಮೈದಾನ, ಸಮುದಾಯ ಭವನ, ಆಸ್ಪತ್ರೆ, ಶಾಲೆ ಮತ್ತು ವಿಹಾರಕ್ಕಾಗಿ ಪ್ರತ್ಯೇಕ ಜಾಗ ಕಲ್ಪಿಸಲಾಗುವುದು. ಇದೇ ಅಪಾರ್ಟ್ ಮೆಂಟ್ ನಲ್ಲಿ 10 ರಿಂದ 15 ಲಕ್ಷ ರುಪಾಯಿ ಮನೆಗಳೂ ಲಭ್ಯಲಿವೆ ಎಂದು ಸಂಸ್ಥೆ ತಿಳಿಸಿದೆ.

ಮನೆ ಖರೀದಿ ಹೇಗೆ

ಮುಂಬೈನ ಎಸ್ ಬಿಐನ ಯಾವುದೇ ಶಾಖೆಯಲ್ಲಿ 200 ರುಪಾಯಿ ನೀಡಿ ಅರ್ಜಿ ಖರೀದಿಸಬಹುದು. ಮೇ 6 ರಿಂದ 20 ದಿನಗಳ ಕಾಲ ಬುಕ್ಕಿಂಗ್ ಆರಂಭವಾಗಿರುತ್ತದೆ. 10 ಸಾವಿರ ಮುಂಗಡದೊಂದಿಗೆ ಅರ್ಜಿ ಸಲ್ಲಿಸಬೇಕು. ಬುಕ್ಕಿಂಗ್ ಅವಧಿ ಮುಗಿದ 15 ದಿನದೊಳಗೆ ಯಾರಿಗೆ ಮನೆ ಸಿಗಲಿದೆ ಎಂಬುದನ್ನು ಘೋಷಣೆ ಮಾಡಲಾಗುವುದು. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಕೆಯಾದಕೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸ್ವೀಕರಿಸಿದ 24 ತಿಂಗಳೊಳಗೆ ಫಲಾನುಭವಿಗಳಿಗೆ ಮನೆ ವಿತರಣೆ ಮಾಡಲಾಗುವುದು ಎಂದು ಟಾಟಾ ಸಂಸ್ಥೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X