ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಪೊಲೀಸರ ಪುಂಡಾಟಿಕೆ: ಬೆಳ್ತಂಗಡಿ ಬಂದ್

By Staff
|
Google Oneindia Kannada News

Bajrang Dal calls for Belthangadi Bandh
ಬೆಳ್ತಂಗಡಿ, ಮೇ. 2: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಆಂಧ್ರ ಪೋಲೀಸರು ನಡೆಸಿದ ಪುಂಡಾಟಿಕೆ, ಅಮಾಯಕನ ಹತ್ಯೆ ಮತ್ತು ಗೂಂಡಾಗಿರಿಯನ್ನು ಖಂಡಿಸಿ ಬಜರಂಗದಳ ಮತ್ತು ವಿವಿಧ ಸಂಘಟನೆಗಳು ಶನಿವಾರ(ಮೇ 2) ಕರೆ ನೀಡಿರುವ ಬೆಳ್ತಂಗಡಿ ಬಂದ್ ಗೆ ಇದುವರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದ ಎಲ್ಲಾ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದು ಸಾರ್ವಜನಿಕರು ಸ್ವಯಂ ಪ್ರೇರಿತ ಬೆಂಬಲ ನೀಡಿದ್ದು ಇದುವರೆಗೆ ಯಾವುದೇ ಅಹಿತಕಾರಿ ಘಟನೆ ನಡೆದ ವರದಿಯಾಗಿಲ್ಲ.

ತಾಲೂಕಿನ ವೇಣೂರು ಠಾಣೆ ವ್ಯಾಪ್ತಿಯ ನಕ್ಸಲ ಪೀಡಿತ ಪ್ರದೇಶಗಳಲ್ಲಿ ಚುನಾವಣಾ ಕರ್ತವ್ಯ ಮುಗಿಸಿ ಧರ್ಮಸ್ಥಳಕ್ಕೆ ಬಂದಿದ್ದ 90 ಮಂದಿ ಆಂಧ್ರ ಪ್ರದೇಶಕ್ಕೆ ಸೇರಿದ ಸಿ ಆರ್ ಪಿ ಎಫ್ ಪೊಲೀಸರು ಕ್ಷುಲ್ಲಕ ಕಾರಣಕ್ಕಾಗಿ ದಾಂಧಲೆಗೆ ಇಳಿದು ಒಬ್ಬ ಅಮಾಯಕನ ಹತ್ಯೆಗೆ ಕಾರಣರಾಗಿದ್ದರು. ಗುಂಡೇಟಿನಿಂದ ಮೃತಪಟ್ಟ ದೇವಾಲಯದ ಉದ್ಯೋಗಿ ಐತಪ್ಪ ಗೌಡ(35) ಕುಟುಂಬಕ್ಕೆ ಒಂದು ಲಕ್ಷ ರುಪಾಯಿ ಪರಿಹಾರ ಘೋಷಿಸಿರುವ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಪೊನ್ನುರಾಜ್ , ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಭರಿಸಲಾಗುವುದು ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತ ಪಡಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಕ್ರಿಕೆಟ್ ಆಡುತ್ತಿದ್ದ ಹುಡುಗರ ಮೇಲೆ ಗುಂಡಿನ ದಾಳಿ ನಡೆಸುವ ಅಗತ್ಯವೇ ಇರಲಿಲ್ಲ. ಧರ್ಮಕ್ಷೇತ್ರದಲ್ಲಿ ಮೊದಲ ಬಾರಿಗೆ ಇಂಥ ಹಿಂಸಾಚಾರ ನಡೆದಿರುವುದು ತೀವ್ರ ನೋವನ್ನುಂಟು ಮಾಡಿದೆ. ಪೋಲೀಸರಿಂದಲೇ ಇಂತ ಅಪಚಾರ ನಡೆದಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಧರ್ಮಸ್ಥಳದಲ್ಲಿ ಆಂಧ್ರ ಪೊಲೀಸರ ಪುಂಡಾಟಿಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X