ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂದಿಜ್ವರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ಹೆಸರು

By Staff
|
Google Oneindia Kannada News

No more Swine Flu, it is now H1N1 influenza
ಜೆನೀವಾ, ಮೇ.1: ಮಾಂಸೋದ್ಯಮದ ತೀವ್ರ ಒತ್ತಡಕ್ಕೆ ಮಣಿದಿರುವ ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ವ್ಯಾಧಿ ಹಂದಿ ಜ್ವರಕ್ಕೆ (ಸ್ವೈನ್ ಫ್ಲೂ) ಹೊಸ ಹೆಸರಿಟ್ಟಿದೆ. ಹಂದಿ ಜ್ವರ ಈಗ H1N1 influenza ಎಂದು ಬದಲಾಗಿದೆ.

''ಇಂದಿನಿಂದ ಈ ಹೊಸ ಸಾಂಕ್ರಾಮಿಕ ವೈರಸನ್ನು H1N1ಎಂದು ಹೆಸರಿಸಿದ್ದೇವೆ '' ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ(ಏ.30) ಪ್ರಕಟಣೆಯಲ್ಲಿ ತಿಳಿಸಿದೆ. ಈ ಕಾಯಿಲೆಯು ಕೇವಲ ಮನುಷ್ಯ್ಯರಿಗೆ ಮಾತ್ರ ಹರಡುತ್ತದೆ ಹೊರತು ಇದುವರೆಗೂ ಯಾವುದೇ ಹಂದಿಗೆ ಈ ವೈರಸ್ ಸೋಕಿದ ಉದಾಹರಣೆ ಇಲ್ಲ. ಹಂದಿ ಮಾಂಸ ತಿನ್ನುವುದಕ್ಕೂ ಈ ವೈರಸ್ ಹರಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಈ ಕಾಯಿಲೆಗೆ ಹಂದಿ ಜ್ವರ ಎಂದು ಹೆಸರಿಟ್ಟ ಕಾರಣ ಹಂದಿ ಮಾಂಸೋದ್ಯಮ ತೀವ್ರ ಇಕ್ಕಟ್ಟಿಗೆ ಸಿಲುಕ್ಕಿತ್ತು. ಮೆಕ್ಸಿಕೊ ಮತ್ತು ಅಮೆರಿಕಾದ ಹಂದಿ ಮಾಂಸ ರಫ್ತು ಪ್ರಮಾಣ ತೀವ್ರ ಕುಸಿತ ಕಂಡಿತು. ಹಂದಿಜ್ವರ ಎಂಬುದನ್ನು ಕೂಡಲೇ ಬದಲಾಯಿಸಬೇಕು ಎಂದು ಅಮೆರಿಕಾ ಮತ್ತು ಯೂರೋಪಿನ ಆಹಾರ ತಯಾರಕರಿಂದ ತೀವ್ರ ಒತ್ತಡ ಎದುರಾಗಿತ್ತು. ಕಡೆಗೂ ವಿಶ್ವ ಆರೋಗ್ಯ ಸಂಸ್ಥೆ ಅವರ ಒತ್ತಡಕ್ಕೆ ಮಣಿದು ಹಂದಿ ಜ್ವರದ ಹೆಸರನ್ನು ಬದಲಾಯಿಸಿದೆ.

ಏನಿದು ಹಂದಿ ಜ್ವರ?
ಸ್ವೈನ್ ಇನ್ ಫ್ಲುಯೆಂಜಾ ಎಂಬುದು ಹಂದಿಗಳಲ್ಲಿ ಕಂಡುಬರುವ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ. ಇತ್ತೀಚೆಗೆ ಅಮೆರಿಕಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ಈ ಕಾಯಿಲೆ ಕಂಡುಬಂದಿತ್ತು. ಸೂಕ್ತ ಔಷಧಿಗಳ ಮೂಲಕ ಚಿಕಿತ್ಸೆ ಪಡೆದರೆ ಗುಣಮುಖವಾಗುವ ಕಾಯಿಲೆ. ಹಂದಿ ಸಾಕಣಿಕೆಯಲ್ಲಿ ತೊಡಗಿರುವ ಮತ್ತು ಹಂದಿಗಳ ವಾಸಸ್ಥಳದ ಸುತ್ತಮುತ್ತಲಿನ ಜನರಲ್ಲಿ ಈ ರೋಗ ಕಾಣಿಸಿಕೊಳ್ಳುವ ಸಂಭವ ಹೆಚ್ಚು.

ಹಂದಿ ಮಾಂಸ ಸೇವನೆಯಿಂದ ಈ ರೋಗ ಬರುವುದಿಲ್ಲ ಎಂದು ದೃಢಪಟ್ಟಿದೆ. ತೀವ್ರ ಜ್ವರ, ಕೆಮ್ಮು, ಗಂಟಲು ನೋವು, ನಿಶ್ಯಕ್ತಿ, ಹಸಿವಾಗದಿರುವಿಕೆ ಕೆಲವರಲ್ಲಿ ವಾಂತಿ ಮತ್ತು ಭೇದಿ ಕಾಣಿಸಿಕೊಳ್ಳುವುದು ಎಚ್1ಎನ್1 ಇನ್ ಫ್ಲೂಯೆಂಜ ರೋಗದ ಲಕ್ಷಣಗಳು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X