ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸ್ಸೆಲ್ಸಿ ಫಲಿತಾಂಶ, ಜಿಲ್ಲಾವಾರು ವಿವರ

By Staff
|
Google Oneindia Kannada News

Karnataka SSLC 2009
ಬೆಂಗಳೂರು, ಮೇ.1: 2009ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಾರ್ಚ್ 30 ರಿಂದ ಏ.6 ರವರೆಗೆ ರಾಜ್ಯಾದ್ಯಂತ ಒಟ್ಟು 2762 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಒಟ್ಟು 8,58,391 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ 219 ಕೇಂದ್ರಗಲ್ಲಿ ನಡೆಸಲಾಯಿತು. ಸುಮಾರು 43,000 ಮೌಲ್ಯಮಾಕರು ಈ ಕಾರ್ಯವನ್ನು ಏ.19ರಂದು ಪೂರ್ಣಗೊಳಿಸಿದರು.

ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಶೇ.86ರಷ್ಟು ಫಲಿತಾಂಶ ಪಡೆದು ಈ ಬಾರಿ ಮೊದಲ ಸ್ಥಾನದಲ್ಲಿದೆ. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಚಿಕ್ಕೋಡಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಉಳಿದಂತೆ ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಚಿತ್ರದುರ್ಗ ಈ ಬಾರಿ 17 ಸ್ಥಾನ ಪಡೆದಿದೆ. ಹೋದ ವರ್ಷದಂತೆ ಈ ಬಾರಿಯೂ ಬೀದರ್ ಜಿಲ್ಲೆ ಶೇ.41ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.

ಕ್ರಮಾಂಕ ಜಿಲ್ಲೆ ಶೇಕಡಾ
1 ಉಡುಪಿ 86.39
2 ಮಂಡ್ಯ 83.78
3 ಚಿಕ್ಕೋಡಿ 82.23
4 ಮಂಗಳೂರು(ದ.ಕ) 82.02
5 ಉತ್ತರಕನ್ನಡ 80.16
6 ಬೆಳಗಾವಿ 79.37
7 ತುಮಕೂರು 78.51
8 ಬಾಗಲಕೋಟೆ 78.26
9 ಕೊಡಗು 77.92
10 ಗದಗ 77.67
11 ಧಾರವಾಡ 76.43
12 ರಾಮನಗರ 75.95
13 ಬಿಜಾಪುರ 75.67
14 ಬೆಂಗಳೂರು ಉತ್ತರ 73.92
15 ಬಳ್ಳಾರಿ 73.82
16 ಚಿಕ್ಕಮಗಳೂರು 73.62
17 ಚಿತ್ರದುರ್ಗ 73.61
18 ಬೆಂಗಳೂರು ದಕ್ಷಿಣ 73.54
19 ಶಿವಮೊಗ್ಗ 73.38
20 ಮಧುಗಿರಿ 73.28
21 ಮೈಸೂರು 72.84
22 ಬೆಂಗಳೂರು ಗ್ರಾಮೀಣ 72.65
23 ಕೊಪ್ಪಳ 72.14
24 ಕಳವು 71.92
25 ರಾಯಚೂರು 71.78
26 ಹಾವೇರಿ 71.73
27 ಹಾಸನ 70.81
28 ಗುಲ್ಬರ್ಗಾ 69.53
29 ಕೋಲಾರ 68.48
30 ಚಾಮರಾಜನಗರ 66.38
31 ಚಿಕ್ಕಬಳ್ಳಾಪುರ 63.58
32 ದಾವಣಗೆರೆ 62.94
33 ಬೀದರ್ 41.08

(ದಟ್ಸ್ ಕನ್ನಡ ವಾರ್ತೆ)

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X