ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ನೇ ಹಂತದ ಮತದಾನದೊಂದಿಗೆ ಚುನಾವಣೆ ಅಂತ್ಯ

By Staff
|
Google Oneindia Kannada News

ನವದೆಹಲಿ, ಏ.30: ಒಂಬತ್ತು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 107 ಲೋಕಸಭೆ ಕ್ಷೇತ್ರಗಳಲ್ಲಿ ಮೂರನೇ ಹಂತದ ಚುನಾವಣೆ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ದೇಶಾದಾದ್ಯಂತ 1,567 ಅಭ್ಯರ್ಥಿಗಳು ಕಣದಲ್ಲಿದ್ದು ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಒಟ್ಟು144 ದಶಲಕ್ಷ ಮತದಾರರು ಮತಚಲಾಯಿಸಿದರು.

ದೇಶದಾದ್ಯಂತ ಒಟ್ಟು 1,65,000 ಮತಗಟ್ಟೆಗಳು, 2,00,000 ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲಾಗಿದೆ. ಒಟ್ಟ್ಟು 6,00,000 ಚುನಾವಣಾ ಅಧಿಕಾರಿಗಳುದೇಶದಾದ್ಯಂತ ಕಾರ್ಯನಿರ್ವಹಿಸಿದರು. ಕರ್ನಾಟಕದ 11 ಲೋಕಸಭೆ ಕ್ಷೇತ್ರಗಳು ಸೇರಿದಂತೆ ಗುಜರಾತ್ ನ 26,ಮಧ್ಯ ಪ್ರದೇಶ 16, ಬಿಹಾರ 11, ಉತ್ತರ ಪ್ರದೇಶ 15, ಪಶ್ಚಿಮ ಬಂಗಾಳ 14, ಮಹಾರಾಷ್ಟ್ರ 10, ಡಿಯು ಡಾಮನ್, ದಾದ್ರಾ ಮತ್ತು ನಗರ್ ಹವೇಲಿ, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರದ ತಲಾ ಒಂದೊಂದು ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.

ಸೋನಿಯಾಗಾಂಧಿ (ರಾಯ್ ಬರೇಲಿ), ಲಾಲ್ ಕೃಷ್ಣ ಅಡ್ವಾಣಿ(ಗಾಂಧಿ ನಗರ), ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ(ಹಾಸನ), ಶರದ್ ಯಾದವ್(ಮಾಧೇಪುರ), ಸೆಹ್ ನವಾಜ್ ಹುಸ್ಸೇನ್(ಭಾಗಲ್ ಪುರ್) ಮುಂತಾದ ಖ್ಯಾತನಾಮರು ಮೂರನೇ ಹಂತದ ಚುನಾವಣಾ ಕಣದಲ್ಲಿದ್ದರು.

(ಏಜೆನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X