ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರಿ ನೌಕರರಿಗೆ ಗೃಹ ಭತ್ಯೆ ಹೆಚ್ಚಳ

By Staff
|
Google Oneindia Kannada News

ಬೆಂಗಳೂರು, ಏ.29: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕರ್ನಾಟಕ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯನ್ನು ನೀಡುತ್ತಿದೆ. ಇತ್ತೀಚೆಗಷ್ಟೇ ಸಂಬಳ ಹೆಚ್ಚಳ ಮಾಡಿದ್ದಲ್ಲದೇ, ಈಗ ಗೃಹಭತ್ಯೆ ಕೂಡ ಹೆಚ್ಚಿಸಿದೆ.

ಪರಿಷ್ಕೄತ ದರಗಳು ಏ.1ರಿಂದ ಅನ್ವಯವಾಗಲಿದೆ. ಮೇ ತಿಂಗಳ ಸಂಬಳದೊಂದಿಗೆ ಹೆಚ್ಚಿನ ಭತ್ಯೆ ಲಭಿಸಲಿದೆ. 'ಏ 'ಶ್ರೇಣಿಯ ನಗರವಾಸಿ ನೌಕರರಿಗೆ ಶೇ. 33 ರಷ್ಟು, 'ಬಿ 1' ಹಾಗೂ 'ಬಿ 2' ಶ್ರೇಣಿ ನಗರವಾಸಿ ನೌಕರರಿಗೆ ಶೇ.13 ರಷ್ಟು, 'ಸಿ' ಹಾಗೂ 'ಡಿ 'ಶ್ರೇಣಿ ನಗರವಾಸಿ ನೌಕರರಿಗೆ ಶೇ.16.50 ರಷ್ಟು, ಮತ್ತು 'ಇ' ಶ್ರೇಣಿಯ ನಗರವಾಸಿ ನೌಕರರಿಗೆ ಶೇ. 20 ರಷ್ಟು ಹೆಚ್ಚಿನ ಭತ್ಯೆ ದೊರೆಯಲಿದೆ.

ಗೃಹ ಭತ್ಯೆ ಹೆಚ್ಚಳದ ಪರಿಷ್ಕೃತ ದರಗಳು ಶಾಶ್ವತ ಹಾಗೂ ಹಂಗಾಮಿ ನೌಕರರಿಬ್ಬರಿಗೂ ಅನ್ವಯಿಸಲಿದೆ. ಅನುದಾನಿತ ವಿದ್ಯಾಸಂಸ್ಥೆ ನೌಕರರು, ಸಮಯಾಧಾರಿತ ಗುತ್ತಿಗೆ ನೌಕರರು, ಬೋಧಕೇತರ ವರ್ಗ, ಯುಜಿಸಿ, ಎಐಸಿಟಿಇ, ಐಸಿಎಆರ್ ಸಿಬ್ಬಂದಿಗಳು, ಇಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿಗಳಿಗೂ ಈ ಸೌಲಭ್ಯ ಸಿಗಲಿದೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಉಲ್ಲೇಖಿಸಿರುವ ರೀತಿಯಲ್ಲಿ ಭತ್ಯೆ ಹೆಚ್ಚಳ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X