ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಮನಿರಸನಗೊಂಡು ಭಾರತಕ್ಕೆ ಮರಳಿದ 'ಕಿಂಗ್' ಖಾನ್

By Staff
|
Google Oneindia Kannada News

Disappointed Shah Rukh Khan returns India
ಡರ್ಬನ್, ಏ. 29 : ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಸತತ ಮೂರು ಸೋಲು ಮತ್ತು ನಾಯಕತ್ವದಿಂದ ಬಳಲುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಒಂದನ್ನೊಂದು ಎದುರಿಸಲಿವೆ.

ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಂತೂ ಇಂದಿನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಗೆಲುವಿನ ಬರ ಎದುರಿಸುತ್ತಿರುವ ನೈಟ್ ರೈಡರ್ಸ್ ತಂಡದ ಮಾಲಿಕ ಕಿಂಗ್ ಶಾರುಖ್ ಖಾನ್ ತಂಡ ಗೆಲುವು ಸಾಧಿಸುವವರೆಗೆ ದಕ್ಷಿಣ ಆಫ್ರಿಕಾಕ್ಕೆ ಮರಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಭಾರತಕ್ಕೆ ಮರಳಿದ್ದಾರೆ. ರೈಡರ್ಸ್ ಸೋಲಿನಿಂದ ಖಾನ್ ಸಹಜವಾಗಿಯೇ ಭ್ರಮನಿರಸನಗೊಂಡಿದ್ದಾರೆ.

ಚಾಲೇಂಜರ್ಸ್ ಮತ್ತು ರೈಡರ್ಸ್ ಎರಡೂ ತಂಡಗಳು ಸೋಲು ಮಾತ್ರವಲ್ಲ ನಾಯಕತ್ವದ ಸಮಸ್ಯೆಯನ್ನೂ ಎದುರಿಸುತ್ತಿವೆ. ಚಾಲೇಂಜರ್ಸ್ ನಾಯಕ ಪೀಟರ್ಸನ್ ಮತ್ತು ರೈಡರ್ಸ್ ನಾಯಕ ಮೆಕಲಮ್ ದಯನೀಯವಾಗಿ ನಾಯಕತ್ವದಲ್ಲಿ ವೈಫಲ್ಯತೆ ಕಂಡಿದ್ದಾರೆ. ಗಾಯದ ಮೇಲೆ ಉಪ್ಪು ಸುರಿದಂತೆ ಪೀಟರ್ಸನ್ ಮತ್ತು ರೈಡರ್ಸ್ ತಂಡದ ಬಿರುಗಾಳಿಯ ಆಟಗಾರ ಕ್ರಿಸ್ ಗೇಯ್ಲ್ ಸಂಪೂರ್ಣ ವಿಫಲರಾಗಿದ್ದಾರೆ. ಮತ್ತು ಈ ಪಂದ್ಯದ ನಂತರ ಅವರಿಬ್ಬರೂ ಇಂಗ್ಲೆಂಡಿಗೆ ಮರಳಲಿದ್ದಾರೆ.

ಕೆವಿನ್ ನಂತರ ಯಾರು? : ಈ ಪ್ರಶ್ನೆಗೆ ವಿಜಯ್ ಮಲ್ಯ ಅವರಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪೀಟರ್ಸನ್ ಇಂಗ್ಲೆಂಡಿಗೆ ಮರಳುತ್ತಿರುವುದರಿಂದ ಹಿರಿಯ ಆಟಗಾರ ಜಾಕ್ ಕಾಲಿಸ್ ಅವರು ನಾಯಕತ್ವ ವಹಿಸುವುದಾಗಿ ಮಲ್ಯ ಹೇಳಿದ್ದರು. ಆದರೆ, ಕಾಲಿಸ್ ಕೂಡ ಲಯ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ. ಇತ್ತ ಮಾಜಿ ನಾಯಕ ರಾಹುಲ್ ದ್ರಾವಿಡ್ ಎರಡನೇ ಮಗ ಹುಟ್ಟಿದ ಸಂಭ್ರಮದಲ್ಲಿದ್ದಾರೆ. ಕೀಪರ್ ಬೌಚರ್ ಮತ್ತು ಅನಿಲ್ ಕುಂಬ್ಳೆ ಕೂಡ ನಾಯಕತ್ವದ ಪರಿಗಣನೆಯಲ್ಲಿದ್ದಾರೆ.

ಒಟ್ಟಿನಲ್ಲಿ ಅಂಕಪಟ್ಟಿಯಲ್ಲಿ ಪಾತಾಳದಲ್ಲಿರುವ ಎರಡೂ ತಂಡಗಳ ಗ್ರಹಚಾರ ನೆಟ್ಟಗಿದ್ದಂತಿಲ್ಲ.

(ದಟ್ಸ್ ಕ್ರಿಕೆಟ್ ವಾರ್ತೆ)

ಪೂರಕ ಓದಿಗೆ
ಕೋಲ್ತತಾ ನೈಟ್ ರೈಡರ್ಸ್ ತಂಡದಲ್ಲಿ ಬಿರುಗಾಳಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X