ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಟಿಟಿಇ 100 ಕೋ ರು ಸಹಾಯಧನ

By Staff
|
Google Oneindia Kannada News

ನವದೆಹಲಿ, ಏ. 28 : ಶ್ರೀಲಂಕಾ ಸೇನಾಪಡೆ ಕಾರ್ಯಾಚರಣೆಯಲ್ಲಿ ನಿರಾಶ್ರಿತರಾಗಿರುವ ಸಾವಿರಾರು ತಮಿಳು ಸಂತ್ರಸ್ತರಿಗೆ ಮಾನವೀಯ ನೆರವು ನೀಡಲು ಭಾರತ ಸೋಮವಾರ 100 ಕೋಟಿಗಳ ರುಪಾಯಿಗಳ ಪರಿಹಾರ ಘೋಷಿಸಿದೆ.

ಭಾರತದ ನಿಷೇಧಿತ ಸಂಘಟನೆ ಎಲ್ ಟಿಟಿಇ ವಿರುದ್ಧ ವೈಮಾನಿಕ ದಾಳಿ ಮತ್ತು ಬಾರಿ ಶಸ್ತ್ರಾಸ್ತ್ರಗಳ ಬಳಕೆ ನಿಲ್ಲಿಸುವುದಾಗಿ ಶ್ರೀಲಂಕಾ ಸರಕಾರ ಪ್ರಕಟಿಸಿದ ಬೆನ್ನಲ್ಲೇ ಈ ಸಹಾಯಧನವನ್ನು ಕೇಂದ್ರ ಸರಕಾರ ಘೋಷಿಸಿದೆ. ಇನ್ನೊಂದು ಬೆಳವಣಿಗೆಯಲ್ಲಿ ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

ದಾಳಿಯ ತೀಕ್ಷ್ಣತೆಯ ತಗ್ಗಿಸುವ ಲಂಕಾ ಸೇನೆಯ ನಿರ್ಧಾರ ತಮಿಳರ ಹಿತರಕ್ಷಣೆಗೆ ಸಂಬಂಧಿಸಿದ ಮಹತ್ವದ ಮೊದಲ ಹೆಜ್ಜೆ ಎಂದು ಭಾರತ ಪ್ರತಿಕ್ರಿಯಿಸಿದೆ. ಯುದ್ಧ ವಲಯದಲ್ಲಿ ಸಿಲುಕಿರುವ ತಮಿಳರ ಸುರಕ್ಷತೆ ದೃಷ್ಟಿಯಿಂದ ಇದೊಂದು ಮಹತ್ವದ ಮೊದಲ ಹೆಜ್ಜೆಯಾಗಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಯುದ್ಧ ವಲಯದಿಂದ ತೆರವುಗೊಂಡಿರುವ ತಮಿಳರ ಹಿತಕ್ಕೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ 100 ಕೋಟಿ ರುಪಾಯಿಗಳ ನೆರವು ನೀಡಿದ್ದಾರೆ. ಈ ನೆರವಿನ ಸದ್ಬಳಿಕೆಯ ಬಗ್ಗೆ ವಿವರವಾದ ಕಾರ್ಯತಂತ್ರ ರೂಪಿಸಲಾಗುವುದು ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಮಿಳರ ಮೇಲೆ ದಾಳಿ ಖಂಡಿಸಿ ಕರುಣಾನಿಧಿ ಉಪವಾಸ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X